ಪ್ರತಿಷ್ಠಿತ ಸರ್ವೋದಯ ಯುವಕ ಸಂಘದ ಅಧ್ಯಕ್ಷರಾಗಿ ನರಸಿಂಹ ಆರ್.

ದರಲಗೋಡು ನಾಗೇಂದ್ರ ಜೋಯ್ಸ್‌ ಮತ್ತು ಸ್ನೇಹಿತರಿಂದ ಸಂಘಕ್ಕೆ ಮತ್ತೆ ಚಾಲನೆ
ಸ್ವಾತಂತ್ರ್ಯ ದಿನಾಚರಣೆಯಂದು ಹಲವು ಕಾರ್ಯಕ್ರಮಗಳು

ಶಿವಮೊಗ್ಗ ಜಿಲ್ಲೆಯ ಅತ್ಯಂತ ಕ್ರಿಯಾಶೀಲ ಹಾಗೂ ಪ್ರತಿಷ್ಠಿತ ಯುವಕ ಸಂಘಗಳಲ್ಲಿ ಒಂದಾದ ಹಿರೇಸರ-ನಿಜಗೂರು ಸರ್ವೋದಯ ಯುವಕ ಸಂಘದ ಅಧ್ಯಕ್ಷರಾಗಿ ನರಸಿಂಹ ಆರ್. ಆಯ್ಕೆಯಾಗಿದ್ದಾರೆ. ಸರ್ವೋದಯ ಯವಕ ಸಂಘ ತಾಲ್ಲೂಕಿನ ಅತ್ಯಂತ ಕ್ರಿಯಾಶೀಲ ಯುವ ಸಂಘಗಳಲ್ಲಿ ಒಂದಾಗಿದ್ದು 2000 ಇಸವಿಯಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳವನ್ನು ಆಗ ತಾಲ್ಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿದ್ದ ದರಲಗೋಡು ನಾಗೇಂದ್ರ ಜೋಯ್ಸ್‌ ಅಧ್ಯಕ್ಷತೆಯಲ್ಲಿ ಅವಿಸ್ಮರಣೀಯವಾಗಿ ಆಯೋಜಿಸಲಾಗಿತ್ತು. ಅಂದು ತೀರ್ಪುಗಾರರಾಗಿ ಸಂತ ಶಿಶಿನಾಳ ಪ್ರಶಸ್ತಿ ವಿಜೇತ ಶ್ರೇಷ್ಟ ಸುಗಮ ಸಂಗೀತ ಗಾಯಕ ಮತ್ತು ನಿರ್ದೇಶಕ ಗರ್ತಿಕೆರೆ ರಾಘಣ್ಣ ಅವರ ತಂಡ ಆಗಮಿಸಿ ಕಾರ್ಯಕ್ರಮಕ್ಕೆ ಮೆರಗು ತಂದಿದ್ದು ಇಂದಿಗೂ ಸವಿನೆನಪಾಗಿ ಉಳಿದಿದೆ. ಬಳಿಕ ನಾಗೇಂದ್ರ ಜೋಯ್ಸ್‌ ತನ್ನ ಆಸಕ್ತಿಯನ್ನು ಸಿನಿಮಾ ರಂಗದ ಕಡೆ ಹೊರಳಿಸಿ ಅನೇಕ ಚಿತ್ರಗಳಿಗೆ ನಿರ್ಮಾಪಕ, ಸಹ ನಿರ್ಮಾಪಕನಾಗಿ ಕಾರ್ಯ ನಿರ್ವಹಿಸಿದ್ದರು. ಕನ್ನಡದ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಮತ್ತು ಜಗ್ಗೇಶ್‌ ಅವರ ನಟನೆಗೆ ಹೊಸ ಆಯಾಮ ನೀಡಿದ ಗುರುಪ್ರಸಾದ್‌ ನಿರ್ದೇಶನದ ʼಮಠʼ ಚಿತ್ರವನ್ನು ಸ್ನೇಹಿತರೊಡಗೂಡಿ ನಿರ್ಮಿಸಿ ನಟಿಸಿದ್ದರು.

ಈಗ ಮತ್ತೊಮ್ಮೆ ನಾಗೇಂದ್ರ ಜೋಯ್ಸ್‌ ಹಾಗೂ ಸ್ನೇಹಿತರ ಪ್ರಯತ್ನದಿಂದ ಮತ್ತೆ ಈ ಯುವಕ ಸಂಘಕ್ಕೆ ಚಾಲನೆ ದೊರೆತಿದ್ದು ನೂತನ ಸಮಿತಿ ಅಸ್ಥಿತ್ವಕ್ಕೆ ಬಂದಿದೆ. ನಾಳಿನ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಿರೇಸರದ ರಂಗಮಂದಿರದಲ್ಲಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ, ವನಮಹೋತ್ಸವ, ರಸಪ್ರಶ್ನೆ ಕಾರ್ಯಕ್ರಮ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯೊಂದಿಗೆ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮ ಲಯನ್ಸ್ ಕ್ಲಬ್ ತೀರ್ಥಹಳ್ಳಿ, ಅಘೋರೇಶ್ವರ ದೇವಸ್ಥಾನ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಹಿರೇಸರ ಒಕ್ಕೂಟ ಇವರ ಸಹಯೋಗದೊಂದಿಗೆ ನಡೆಯಲಿದೆ. ನೂತನ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿಯಾಗಿ ಸಚಿನ್ ಹಿರೇಸರ, ಉಪಾಧ್ಯಕ್ಷರಾಗಿ ಪೂರ್ಣಚಂದ್ರ, ಪ್ರಮೋದ್ ಬಿ.., ಖಜಾಂಚಿಯಾಗಿ ಸುಮಂತ್ ಹಿರೇಸರ, ಸಹಕಾರ್ಯದರ್ಶಿಯಾಗಿ ಸಚಿನ್ ಮೇಲಿನಸರ, ತ್ಯಾಗರಾಜ್ ಬೇಡನಬೈಲು, ಪ್ರಮೋದ್ ಹೊಸತೋಟ, ಕಾರ್ಯಕಾರಿ ಸದಸ್ಯರುಗಳಾಗಿ ಪ್ರಜ್ವಲ್ ಹಿರೇಸರ, ಪ್ರದೀಪ್ ಹೊಸತೋಟ, ಹರ್ಷ ಹಿರೇಸರ, ವಿಕಾಸ್ ದರಲಗೋಡು, ಸುನೀಲ್ ಮೇಲಿನಸರ, ಸುಧಾಕರ ಹೊಸತೋಟ, ಸಚಿನ್ ಮರಹಳ್ಳಿ ಚಟುವಟಿಕೆ ಆರಂಭಿಸಲಿದ್ದಾರೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post