ಶಚೀಂದ್ರ ಹೆಗ್ಡೆಗೆ ಪಿತೃ ವಿಯೋಗ
ನಂಟೂರು ಗ್ರಾಮದ
ಹಿರಿಯ ಕೃಷಿಕರಾದ ಗುಂಡಪ್ಪ ಹೆಗ್ಡೆ (94) ಶನಿವಾರ ನಿಧನರಾದರು. ಗುಂಡಪ್ಪ ಹೆಗ್ಡೆಯವರು ಆಗುಂಬೆ ಶ್ರೀ ವೇಣುಗೋಪಾಲಸ್ವಾಮಿ
ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಆಗಿದ್ದರು. ಅವರಿಗೆ ಪುತ್ರ ತಾಲ್ಲೂಕು ಗ್ಯಾರಂಟಿ ಅನುಷ್ಟಾನ
ಸಮಿತಿ ಅಧ್ಯಕ್ಷ, ತುಳುನಾಡು ಸಿರಿ ಸೌಹಾರ್ದ ಸಹಕಾರಿಯ ನಿರ್ದೇಶಕ ನಾಬಳ ಶಚ್ಚೀಂದ್ರ ಹಾಗೂ ಇಬ್ಬರು
ಪುತ್ರಿಯರು ಇದ್ದಾರೆ. ಅಂತ್ಯಕ್ರಿಯೆ ನಾಬಳ ಗ್ರಾಮದಲ್ಲಿ ಭಾನುವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು
ತಿಳಿಸಿದೆ.
