ಮೋದಿ ಸರ್ಕಾರದ ದಮನಕಾರಿ ನೀತಿ ಖಂಡನೀಯ

ಪ್ರಶ್ನೆ ಮಾಡುವ ಎಲ್ಲರನ್ನು ದೇಶದ್ರೋಹಿಗಳು ಎಂದರೆ ಇದು ಪ್ರಜಾಪ್ರಭುತ್ವ ಹೇಗಾಗುತ್ತದೆ
ಸಚಿನ್‌ ಗರಗ, ರಹಮತ್‌ ಉಲ್ಲಾ ಅಸಾದಿ ಆಕ್ರೋಶ

ಮೋದಿ ಸರ್ಕಾರ ಭಿನ್ನ ದನಿಯನ್ನು ದಮನ ಮಾಡಲು ನೋಡುತ್ತಿದೆ. ಸರ್ಕಾರದ ಕಾರ್ಯ ಶೈಲಿಯನ್ನು ಪ್ರಶ್ನೆ ಮಾಡುವವರನ್ನು ಹೀನಾಯವಾಗಿ ಅದರ ಐಟಿ ಸೆಲ್ ಮತ್ತು ಮಡಿಲ ಮಾಧ್ಯಮಗಳ ಮೂಲಕ ದೇಶ ದ್ರೋಹಿಗಳು ಎಂಬಂತೆ ಚಿತ್ರಿಸುತ್ತಿದೆ. ಮುಸ್ಲಿಮರು ದನಿಯೆತ್ತಿದರೆ ಪಾಕಿಸ್ತಾನಿ, ಚಿಂತಕರುನಗರ ನಕ್ಸಲ್, ರೈತರನ್ನು ಖಾಲಿಸ್ತಾನಿ. ಹೀಗೆ ಸರ್ಕಾರವನ್ನು ಟೀಕಿಸುವುದೇ ಅಪರಾಧ ಎಂಬ ವಾತಾವರಣ ಸೃಷ್ಟಿ ಮಾಡಲಾಗುತ್ತಿದೆ. ಇದು ಖಂಡನಿಯ ಎಂದು ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ರಹಮತ್ ಉಲ್ಲಾ ಆಸಾದಿ ಹೇಳಿದ್ದಾರೆ.

ಇಂದು ತಾಲೂಕು ಕಚೇರಿ ಎದುರು ತಾಲೂಕು ಅಹಿಂದ ಸಂಘಟನೆ ವತಿಯಿಂದ ದೆಹಲಿ ಜಂತರ್ಮಂತರನಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ ಸೂಚಿಸಿ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಮಾತಾಡಿದ ಅವರು ಕೇಂದ್ರ ಸರ್ಕಾರ ಮುಗ್ದ ವಿದ್ಯಾರ್ಥಿಗಳ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವುದು ಖಂಡನೀಯ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟ ಆಡುತ್ತಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಅಹಿಂದ ಸಂಘಟನೆಯ ಅಧ್ಯಕ್ಷ ಸಚಿನ್‌ ಗರಗ ಮಾತನಾಡಿ, ಭಾರತದಲ್ಲಿ ನಂಬಿಕೆಗಳು ಅತಿ ಮುಖ್ಯ. ವಿದ್ಯಾರ್ಥಿ ಸಮೂಹ ದೇಶದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅದನ್ನು ಪ್ರಶ್ನೆ ಮಾಡಲು ಮುಂದಾದರೆ ಅದನ್ನು ಸರಿಪಡಿಸುವ ಬದಲು ಪ್ರಶ್ನಿಸುವವರನ್ನು ಹತ್ತಿಕ್ಕುವ ಪ್ರಯತ್ನ ಸರಿಯಲ್ಲ. ಬೇಟಿ ಬಚಾವೋ ಎಂಬುದಾಗಿ ಹೇಳುವ ಅವರಿಂದ ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಹಾರ ನಡೆದಿದೆ. ಪೊಲೀಸ್‌ ಅಧಿಕಾರಿಗಳು ತಮ್ಮ ಹೆಸರಿನ ಬ್ಯಾಡ್ಜ್‌ ತೆಗೆದು ಲಾಠಿ ಬೀಸುತ್ತಾರೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿದಿದೆಯೇ ಎಂದು ಪ್ರಶ್ನಿಸಿದರು.

ಇರೆಗೋಡು ಶ್ರೀಧರ್ಮೂರ್ತಿ, ಹಾರೋಗೊಳಿಗೆ ವಿಶ್ವನಾಥ, ಮಂಡಗದ್ದೆ ದಿನೇಶ್‌, ವರಲಕ್ಷ್ಮೀ, ಬೆಜ್ಜವಳ್ಳಿ ಪುತ್ತಬ್ಬ ಮುಂತಾವರು ಇದ್ದರು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post