ನೊಂದಾಯಿತ ಶಿಭಿರಾರ್ಥಿಗಳಿಗೆ ಉಚಿತ ಊಟ, ವಸತಿ ವ್ಯವಸ್ಥೆ
ಖ್ಯಾತ ಕಲಾವಿದ ಕೆ.ಟಿ.
ಶಿವಪ್ರಸಾದ್ ಚಿತ್ರಕಲೆ, ಫೋಟೋಗ್ರಫಿ, ವಾಸ್ತುಶಿಲ್ಪ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ, ಜನಚಳವಳಿಗಳಲ್ಲಿ
ಹೋರಾಟಗಾರನಾಗಿ ಸಮಾನತೆಯ ಸಮಾಜವನ್ನು ಕಟ್ಟಲು ಬದ್ಧತೆಯಿಂದ ಶ್ರಮಿಸಿದ ಬಹುರೂಪಿ. ಇತ್ತೀಚಿಗೆ ನಮ್ಮನ್ನು
ಅಗಲಿದ ಸಾಧಕನ ಕೊಡುಗೆಯನ್ನು ಸ್ಮರಿಸಲು, ಜೀವಂತವಾಗಿಡಲು ಅವರ ಬದುಕು ಸಾಧನೆಯನ್ನು ಸ್ಮರಿಸುವ ಎರಡು
ದಿನಗಳ ಪುನರ್ಮನನ ವಿಚಾರ ಸಂಕಿರಣವನ್ನು ಆಗಸ್ಟ್ 8, 9 ರಂದು, ಕುಪ್ಪಳಿಯಲ್ಲಿ ಏರ್ಪಡಿಸಲು ರಾಷ್ಟ್ರಕವಿ
ಕುವೆಂಪು ಪ್ರತಿಷ್ಠಾನ ಸಿದ್ಧತೆ ನಡೆಸಿದೆ.
ನಾಲ್ಕು ಪ್ರತ್ಯೇಕ
ಗೋಷ್ಠಿಗಳಿರುವ ಈ ವಿಚಾರ ಸಂಕಿರಣದಲ್ಲಿ ಅವರ ಚಿತ್ರಕಲೆ. ಫೋಟೋಗ್ರಫಿ, ವಾಸ್ತುಶಿಲ್ಪ ಮತ್ತು ಹೋರಾಟದ
ಬದುಕಿನ ವಿವರಗಳಿಗೆ ಮರುಭೇಟಿ ನೀಡಿ ಚರ್ಚಿಸಲು ನಾಡಿನ ಆಯಾ ಕ್ಷೇತ್ರದ ತಜ್ಞರು, ಹೋರಾಟಗಾರರು, ಶಿವಪ್ರಸಾದ್
ಅವರ ಒಡನಾಡಿಗಳು ಮತ್ತು ಕಲಾವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣದಲ್ಲಿ
ಭಾಗವಹಿಸಲು ಇಚ್ಚಿಸುವ ಆಸಕ್ತರು ಶಿವಪ್ರಸಾದ್ ಅಭಿಮಾನಿಗಳು ಕಾರ್ಯಕ್ರಮದ ಸಂಚಾಲಕರಾದ ಈಶ್ವರ ಪ್ರಸಾದ್
ಬಾಬು ಈಮೇಲ್‌ಗೆ (babues@gmail.com) ದಿನಾಂಕ 28.07.2026 ರೊಳಗೆ ಪತ್ರ ಕಳುಹಿಸಿ ನೋಂದಾಯಿಸಿಕೊಳ್ಳಲು
ಸೂಚಿಸಿದೆ. ಐವತ್ತು ಮಂದಿಗೆ ಅವಕಾಶವಿದ್ದು ಚಿತ್ರಕಲಾವಿದರು ಮತ್ತು ಕಲಾ ವಿದ್ಯಾರ್ಥಿಗಳಿಗೆ ಆದ್ಯತೆ
ನೀಡಲಾಗುವುದು. ನೋಂದಾಯಿತ ಶಿಭಿರಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ ಎಂದು
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಿಳಿಸಿದ್ದಾರೆ.
