ಧ್ಯೇಯ ಆರ್‌. ಸರ್ಜಾ ಚೆಸ್‌ ವಿಶ್ವ ಚಾಂಪಿಯನ್‌ ಪಂದ್ಯಕ್ಕೆ ಆಯ್ಕೆ

ಏಕಲವ್ಯ ಪ್ರಶಸ್ತಿ ಪುರಸ್ಕೃತ ಶ್ರೀರಾಮ ಸರ್ಜಾ ಪುತ್ರ

ಮಲೆನಾಡಿನ ಚೆಸ್ ಕ್ರೀಡೆಗೆ ತಾಲೂಕಿನ ಸರ್ಜಾ ಕುಟುಂಬದ ಕೊಡುಗೆ ಅಪಾರವಾದದ್ದು. ಸರ್ಜಾ ಕುಟುಂಬದ ಮತ್ತೊಂದು ಕುಡಿ ಯು-8 ವಿಭಾಗದಲ್ಲಿ ಚೆಸ್ ವಿಶ್ವ ಚಾಂಪಿಯನ್ ಪಂದ್ಯಾವಳಿಗೆ ಬಾಲ ಪ್ರತಿಭೆಗೆ ತೀರ್ಥಹಳ್ಳಿ ತಾಲೂಕು ಮೂಲದ ಕೆನಡಾ ವಾಸಿ ಧ್ಯೇಯ ಆರ್. ಸರ್ಜಾ ಆಯ್ಕೆ ಆಗಿರುವುದು ಪ್ರತಿಯೊಬ್ಬ ಮಲೆನಾಡಿಗರು ಹೆಮ್ಮೆಪಡುವ ವಿಚಾರವಾಗಿದೆ.

ಹೆಸರಾಂತ ಚೆಸ್ ತರಬೇತುದಾರರು, ಜಿಲ್ಲಾ ಚೆಸ್ ಆಸೋಶಿಯನ್ನಿನ ಸರ್ಜಾ ಚಂದ್ರಕಾಂತ್ ಮಗ ಶ್ರೀರಾಮ ಸರ್ಜಾ ಹಾಗೂ ವಿಜೇತಾ ದಂಪತಿಗಳ ಪುತ್ರನೇ ಧ್ಯೇಯ ಸರ್ಜಾ. ಪ್ರತಿಭಾವಂತ ಬಾಲಕನ ತಂದೆ ಹೆಸರಾಂತ ಚೆಸ್ ಆಟಗಾರ ಶ್ರೀರಾಮ ಸರ್ಜಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡೆದವರು. ಇವರು ಚೆಸ್ ಕ್ರೀಡೆಯ ಸಾಧನೆಗೆ ರಾಜ್ಯ ಸರ್ಕಾರದ ಏಕಲವ್ಯ ಪ್ರಶಸ್ತಿಗೂ ಪಾತ್ರರಾದವರು.

ಪ್ರಸ್ತುತ ಕೆನಡಾದಲ್ಲಿ ವಾಸವಾಗಿರುವ ಶ್ರೀರಾಮ ಸರ್ಜಾ ಪುತ್ರ ಧ್ಯೇಯ ಆರ್ ಸರ್ಜಾ ತಂದೆಯ ಸಾಧನೆಯ ಹಾದಿಯಲ್ಲಿ ಸಾಗಿ ಬರುತ್ತಿದ್ದು U-8 ನಾರ್ತ್ ಅಮೇರಿಕನ್ ಚೆಸ್ ಚಾಂಪಿಯನ್ ಹಾಗೂ ವಿಶ್ವ ಚೆಸ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಸದ್ಯದಲ್ಲೆ ಪಂದ್ಯಾವಳಿ ನಡೆಯಲಿದೆ ಎಂದು ತಿಳಿದುಬಂದಿದೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post