ಕುರುವಳ್ಳಿಯ ಜೋಪಡಿ ಕುಟುಂಬಕ್ಕೆ ಹಕ್ಕುಪತ್ರ ವಿತರಣೆ

ಸ್ವಾತಂತ್ರೋತ್ತರ ಕಾಂಗ್ರೆಸ್ ಆಡಳಿತದ ಅವ್ಯವಸ್ಥೆ
ಲೇಔಟ್ ಮಾಫಿಯಾದಿಂದ ನಿವೇಶನ ಕಲ್ಪಿಸುವಲ್ಲಿ ವಿಳಂಬ - ಆರಗ ಟೀಕೆ
ಕುರುವಳ್ಳಿಯಲ್ಲಿ ಜೋಪಡಿಯ ಪ್ಲಾಸ್ಟಿಕ್ ಟಾರ್ಪಲಿನ್ ಅಡಿ ಜೀವನ ನಡೆಸುವ ಕುಟುಂಬಗಳಿಗೆ ಹಕ್ಕುಪತ್ರ ಕಲ್ಪಿಸಬೇಕು ಎಂದು ಅನೇಕ ವರ್ಷಗಳಿಂದ ಶ್ರಮ ಹಾಕಿದ್ದೇನೆ. ಲೇಔಟ್ ಮಾಫಿಯಾ ನಡೆಸುವವರು ಹಿಂದೆ ಪುತ್ತಿಗೆ ಮಠದ ಜಾಗ ಕೊಳ್ಳದಂತೆ ಪಿತೂರಿ ನಡೆಸಿದರು. ಜಾಗಕ್ಕಾಗಿ ಮುಂಗಡ ಹಣವನ್ನು ಪಟ್ಟಣ ಪಂಚಾಯಿತಿ ನೀಡಿತ್ತು. ಕೆಲವರು ಅರಣ್ಯ ಇಲಾಖೆಯನ್ನು ಮುಂದಿಟ್ಟುಕೊಂಡು ಬಡ ಕುಟುಂಬಗಳಿಗೆ ನಿವೇಶನ ಹಂಚದಂತೆ ಪಿತೂರಿ ಮಾಡಿದ್ದರು ಎಂದು ಶಾಸಕ ಆರಗ ಜ್ಞಾನೇಂದ್ರ ಶುಕ್ರವಾರ ಜೋಪಡಿಯ 19 ಕುಟುಂಬಗಳಿಗೆ ಹೊರಬೈಲಿನಲ್ಲಿ ನಿರ್ಮಿಸಿರುವ ನಿವೇಶನದ ಹಕ್ಕುಪತ್ರ ವಿತರಿಸಿ ಅವರು ವಾಗ್ದಾಳಿ ನಡೆಸಿದರು.

ಭಾರತಕ್ಕೆ ಅಂಬೇಡ್ಕರ್ ನೀಡಿದಂತಹ ಸಂವಿಧಾನ ಯಾವತ್ತೂ ಕೆಟ್ಟ ಆಡಳಿತಗಾರನ ಕೈಗಳಿಗೆ ಸಿಗಬಾರದು ಎಂದಿದ್ದರು.‌ ಅಲ್ಲದೇ ಮೀಸಲಾತಿ ಕೇವಲ 10 ವರ್ಷ ನೀಡಿದರೆ ಮಹತ್ವದ ಬದಲಾವಣೆ ಬರುತ್ತದೆ ಎಂಬ ವಾದ ಮಂಡಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಮೀಸಲಾತಿ ಈವರೆಗೆ ಮುಂದುವರೆದಿದೆ. ಆದರೂ ಅಲೆಮಾರಿ ಸಮುದಾಯಗಳು ಸೇರಿದಂತೆ ಅನೇಕ ಸಮುದಾಯಗಳಿಗೆ ಇಂದಿಗೂ ಸರಿಯಾದ ಸೌಕರ್ಯ ಕೊಡಲು ಸಾಧ್ಯವಾಗಿಲ್ಲ. 70 ವರ್ಷ ಆಡಳಿತ ನಡೆಸಿದ ಸರ್ಕಾರದ ಕಣ್ಣುಗಳು ಕುರುಡಾಗಿದ್ದವು. ಕಿವಿಗಳಿವೆ ಕೇಳಿದ ಜಡ ಬಂದಿದ್ದವು ಎಂದು ತಿವಿದರು.

ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ಭೂಮಿಯ ಒಡೆತನ ಪಡೆಯುವ ಆನಂದ ಭೂಮಿ ಇಲ್ಲದವರನ್ನು ಕೇಳಬೇಕು” ಎಂದರು.

ಕರ್ನಾಟಕ ಅಲೆಮಾರಿ ಮತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ., ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಚೀಂದ್ರ ಹೆಗ್ಡೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ರತ್ನಾಕರ ಎನ್ ಶೆಟ್ಟಿ, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರಹಮತ್ ಉಲ್ಲಾ ಅಸಾದಿ, ಮುಖ್ಯಾಧಿಕಾರಿ ಡಿ.ನಾಗರಾಜ, ತಹಶೀಲ್ದಾರ್ ಎಸ್.ರಂಜಿತ್ ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post