ಜಾಗತಿಕ ಸುಸ್ಥಿರತೆ ಮತ್ತು ನಾವೀನ್ಯತೆ ಪ್ರಶಸ್ತಿ-2026
ಅನುಷ್ಠಾನದ ಯಶೋಗಾಥೆ ಬಿಚ್ಚಿಟ್ಟ ಅಸಾದಿ-ಜವಳಿ ಜೋಡಿ
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ 24/7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಅರ್ಥ್ ವಾಟರ್ ಫೌಂಡೇಷನ್ ಕೊಡ ಮಾಡುವ THE EXCELLENCE IN SUSTAINABLE URBAN DRINKING WATER INFRASTRUCTURE - MUNICIPAL CORPORATION ರಾಷ್ಟ್ರಮಟ್ಟದ ಜಾಗತಿಕ ಸುಸ್ಥಿರತೆ ಮತ್ತು ನಾವೀನ್ಯತೆ ಪ್ರಶಸ್ತಿ-2026 ಗೆ ಆಯ್ಕೆಯಾಗಿದೆ.
ಇದರ ಭಾಗವಾಗಿ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಆಯೋಜಿಸಿದ್ದ ವಿಶೇಷ ವರ್ಚುವಲ್ ವಿಸಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷರಾದ ರಹಮತ್ ಉಲ್ಲಾ ಅಸಾದಿ ಮತ್ತು ಸಂದೇಶ್ ಜವಳಿ ಅಧಿಕಾರಿಗಳಿಗೆ ಯೋಜನೆಯ ಅನುಷ್ಟಾನದ ಯಶೋಗಾಥೆಯನ್ನು ಬಿಚ್ಚಿಟ್ಟಿದ್ದಾರೆ.
ಅನುಷ್ಠಾನದ ಯಶಸ್ವಿಗೆ ಎದುರಾದ ಸವಾಲು, ತಾಂತ್ರಿಕ ನಿರ್ವಹಣೆ ಹಾಗೂ ಸಾರ್ವಜನಿಕ ಸಹಭಾಗಿತ್ವವನ್ನು ಹೇಗೆ ಪಡೆದುಕೊಳ್ಳಲಾಯಿತು ಎಂಬ ಬಗ್ಗೆ ಸುದೀರ್ಘ ಅನುಭವದ ಮಾಹಿತಿ ಹಂಚಿಕೊಂಡರು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಜೊತೆಗೆ ಅಣ್ಣಾವರ ಧಾರವಾಡ ನಗರಗಳಿಗೆ 24*7 ಯಶಸ್ವಿ ಅನುಷ್ಠಾನಕ್ಕಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದ್ದು ಇಡೀ ದೇಶಕ್ಕೆ ಮಾದರಿ ಪಟ್ಟಣ ಪಂಚಾಯಿತಿಯಾಗಿ ಗುರುತಿಸಿಕೊಂಡಿದೆ. ವಿಡಿಯೋ ಕಾನ್ಫರೆನ್ಸಿನಲ್ಲಿ ರಾಜ್ಯದ 56 ಕ್ಕಿಂತ ಅಧಿಕ ಅಧಿಕಾರಿಗಳು ಪಾಲ್ಗೊಂಡು ತೀರ್ಥಳ್ಳಿಯ 24*7 ಯಶಸ್ವಿ ಯೋಜನೆಯ ಮಾಹಿತಿಯನ್ನು ಪಡೆದುಕೊಂಡರು. ಕಾರ್ಯಕ್ರಮ ಕರ್ನಾಟಕ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಶಿವಮೊಗ್ಗ ಕೇಂದ್ರ ಕಚೇರಿಯಲ್ಲಿ ನಡೆಯಿತು. ಎಕ್ಸಿಕ್ಯೂಟಿವ್ ಇಂಜಿನಿಯರ್ ರವಿ, ಎಇ ಗಣೇಶ್ ಕಾರ್ಯಕ್ರಮ ನಡೆಸಿಕೊಟ್ಟರು.