ಹಿರಿಯ ಚಿತ್ರ ಕಲಾವಿದ ಕೆ.ಟಿ.ಶಿವಪ್ರಸಾದ್‌ ಇನ್ನಿಲ್ಲ

ಕುಪ್ಪಳಿಯ ಕುವೆಂಪು ಕವಿಶೈಲ ನಿರ್ಮಿಸಿದ ಕಲಾವಿದ

ಕುವೆಂಪುರವರ ಅಸಾಧಾರಣ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದ್ದ ಕುಪ್ಪಳಿಯ ವಿಭಿನ್ನತೆಯನ್ನು ಜಗತ್ತಿಗೆ ವಿಶಿಷ್ಟವಾಗಿ ತೋರಿಸಲು ಅವರ ನಿಧನದ ಸಮಾಧಿ ಸ್ಥಳವನ್ನು ಪರಿಸರದ ಸೊಬಗನ್ನು ಕಾಪಾಡುವ ಜೊತೆಗೆ ಅದೇ ಸ್ಥಳದಲ್ಲಿ ಅದ್ಬುತವಾದ ಸ್ಮಾರಕ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಿರಿಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ (78) ಬದುಕಿಗೆ ವಿದಾಯ ಹಾಡಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಆಪ್ತರಾಗಿದ್ದ ಅವರು ಈಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ರೇಷ್ಟ ಚಿತ್ರಕಲಾವಿದರಾಗಿರದೆ ಕರ್ನಾಟಕದ ಜನಪರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಇಂದು ಕುವೆಂಪು ಸಾಹಿತ್ಯ ಸೃಷ್ಟಿಯಷ್ಟೇ ಅವರ ಸ್ಮಾರಕವೂ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಇಲ್ಲಿನ ಬೃಹತ್ ಗಾತ್ರದ ಕಲ್ಲಿನ ಕಂಬಗಳು ನೋಡುಗರಿಗೆ ಅನೂಹ್ಯವಾದ ಅನುಭವವನ್ನು ನೀಡುತ್ತವೆ ಮತ್ತು ಇಲ್ಲಿನ ಪ್ರಕೃತಿಯೊಳಗೆ ತನ್ಮಯರಾಗಿ ಬೆರೆತು ಹೋಗುವಂತೆ ಮಾಡುತ್ತವೆ. ಅಂತಹ ವಾತಾವರಣವನ್ನು ಅವರ ಕಲಾಕೃತಿಗಳು ಕುಪ್ಪಳಿಯಲ್ಲಿ ಸೃಷ್ಟಿಸಿವೆ.

ಪರಿಸರ, ರೈತ ಹಾಗೂ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಕೆ.ಟಿ. ಶಿವಪ್ರಸಾದ್ ಹಾಸನ ಜಿಲ್ಲೆಯ ಕಾರ್ಲೆಯ ಆಗಿನ ಖ್ಯಾತ ಉದ್ಯಮಿ ಎಲ್.ಟಿ. ಕಾರ್ಲೆ ಅವರ ಪುತ್ರ. 1947ರಲ್ಲಿ ಕೊಡಗಿನ ಮಡಿಕೇರಿ ತಾಲೂಕಿನ ಕೃಷಿ ಕುಟುಂಬವೊಂದರಲ್ಲಿ ಜನಿಸಿದ ಅವರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಪರಿಣಾಮ ಇಂಜಿನಿಯರಿಂಗ್‌ ಅಧ್ಯಯವನ್ನ ಅರ್ಧಕ್ಕೇ ಮೊಟಕುಗೊಳಿಸಿ ಮುಂಬೈನ ಪ್ರತಿಷ್ಠಿತ ಸರ್‌ ಜೆ.ಜೆ ಸ್ಕೂಲ್‌ ಆಫ್‌ ಆರ್ಟ್‌ ಸೇರಿದರು. ಅಲ್ಲಿ ಕಠಿಣ ಪರಿಶ್ರಮದಿಂದ 1973ರಲ್ಲಿ ಚಿತ್ರಕಲೆಯಲ್ಲಿ ಡಿಪ್ಲೊಮಾ ಪದವಿ ಪಡೆದು, ಕಲಾ ಜಗತ್ತಿಗೆ ಅಧಿಕೃತವಾಗಿ ಹೆಜ್ಜೆ ಇಟ್ಟರು.

ಶಿವಪ್ರಸಾದ್‌ ಅವರ ವಿಶಿಷ್ಟ ಕಲಾ ಶೈಲಿಯನ್ನ ಬಿಟ್ರನ್‌ನ ಖ್ಯಾತ ಮಾಡರ್ನಿಸ್ಟ್‌ ಕಲಾಕಾರ ಲುಸಿಯನ್‌ ಫ್ರಾಯ್ಡ್‌ ಅವರ ಶೈಲಿಗೆ ಹೋಲಿಸಲಾಗ್ತಿತ್ತು. ಇವರ ಕಲಾಕೃತಿಗಳು ಕೇವಲ ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಅಪಾರ ಪ್ರಶಂಸೆಗಳಿಸಿದ್ದವು. 1976ರಿಂದಲೇ ಬೆಂಗಳೂರು, ಮೈಸೂರು, ಮುಂಬೈ ಮತ್ತು ನವದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವರ ಹಲವಾರು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಗಳು ಯಶಸ್ವಿಯಾಗಿ ನಡೆದಿದ್ದವು. ಮುಂಬೈನ ಜಹಾಂಗೀರ್‌ ಆರ್ಟ್‌ ಗ್ಯಾಲರಿ, ಚೆನ್ನೈನ ಸಾಕ್ಷಿ ಗ್ಯಾಲರಿ ಹಾಗೂ ನವದೆಹಲಿಯ ಆರ್ಟ್‌ ಟುಡೇ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಇವರ ಸಿನಿಮಾಗಳು ಕಲಾ ರಸಿಕರ ಮನ ಗೆದ್ದಿದ್ದವು.

ಅಂತರರಾಷ್ಟ್ರೀಯ ಮಟ್ಟದಲ್ಲೂ ಇವರ ಸಾಧನೆ ವಿಸ್ತರಿಸಿತ್ತು. ಭೋಪಾಲ್‌ ಬಿನ್ನಾಲೆ (1988), ಬಾಂಬೆ ಆರ್ಟ್‌ ಸೊಸೈಟಿ ಶತಮಾನೋತ್ಸವ ಪ್ರದರ್ಶನ (1989) ಹಾಗೂ ಹಾಂಗ್‌ಕಾಂಗ್‌ ಗ್ಯಾಲರಿಗಳಲ್ಲಿ (1996) ಇವರ ಕಲಾಕೃತಿಗಳು ಪ್ರದರ್ಶನಗೊಂಡು ಜಾಗತಿಕ ಗಮನ ಸೆಳೆದಿದ್ದವು.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post