ನಮ್ಮನಾಡು ಪತ್ರಿಕೆಯ ತೀರ್ಥಹಳ್ಳಿ ತಾಲ್ಲೂಕು ವರದಿಗಾರ ಮತ್ತು ತೀರ್ಥಹಳ್ಳಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮುರುಘರಾಜ್‌ಗೆ ಜೆಸಿಐ ಸೀನಿಯರ್ ಛೇಂಬರ್‌ನ ಅಧ್ಯಕ್ಷ ಸ್ಥಾನ ಹುಡುಕಿಕೊಂಡು ಬಂದಿದೆ. ಕಾರ್ಯದರ್ಶಿಯಾಗಿ ಮಲ್ಲೇಸರ ಫೃಥ್ವಿರಾಜ್ ಆಯ್ಕೆಯಾಗಿದ್ದಾರೆ.
ಕಳೆದ ಮೂರು ದಶಕಗಳಿಂದ
ಕೋಣಂದೂರು ಭಾಗದಲ್ಲಿ ಉತ್ತಮ ಸಂಘಟಕನಾಗಿ ಗುರುತಿಸಿಕೊಂಡಿರುವ ಮುರುಘರಾಜ್ ಆ ಭಾಗದ ಹಲವಾರು ಸಾಮಾಜಿಕ
ಸಮಸ್ಯೆಗಳಿಗೆ ನಿಯಮಿತವಾಗಿ ಸ್ಪಂದಿಸುತ್ತಲೇ ಬಂದವರು. ಪತ್ರಿಕಾ ವಿತರಕ, ಪಿಗ್ಮಿ ಸಂಗ್ರಹಣೆ, ಎಲ್‌ಐಸಿ,
ಟೈಲರಿಂಗ್ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು ಪ್ರತಿಯೊಂದರಲ್ಲಿಯೂ
ತಮ್ಮ ತನವನ್ನು ತೋರುತ್ತ ವಿಶಿಷ್ಟ ವ್ಯಕ್ತಿಯಾಗಿ ಆ ಭಾಗದಲ್ಲಿ ಹೆಸರು ಮಾಡಿದವರು.
ಅವರ ಪತ್ನಿ ನಾಗರತ್ನಾ
ಮುರುಘರಾಜ್ ಕೋಣಂದೂರು ಕೂಡ ಗ್ರಾಮ ಪಂಚಾಯಿತಿ ಸದಸ್ಯರಾಗಿ ಜನಪ್ರಿಯರಾಗಿದ್ದರು. ಕೋಣಂದೂರು ಪ್ರಾಥಮಿಕ
ಕೃಷಿ ಪತ್ತಿನ ಸಹಕಾರ ಸಂಘ, ಟಿಎಪಿಸಿಎಂಎಸ್ ನಿರ್ದೇಶಕಿಯಾಗಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ದಂಪತಿ ಕೋಣಂದೂರಿನಲ್ಲಿ ನಿರ್ಮಿಸಿರುವ ಗ್ರೀನ್ ಹಾರ್ಟ್ ಕೆಫೆ ಎಂಬ ಚಿಕ್ಕ ಕಾಫಿ ಕೆಫೆ ಮತ್ತು
ಸಭಾಂಗಣ ವೈಶಿಷ್ಟ ಪೂರ್ಣವಾಗಿ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಇತ್ತೀಚೆಗೆ ಸೀನಿಯರ್
ಛೇಂಬರ್‌ನ ಕುಮಾರ ಕುರ್ಸೆ ಹಾಗೂ ಎಲ್ಲಾ ಪದಾಧಿಕಾರಿಗಳು ಅಚ್ಚರಿಪಡುವಷ್ಟು ಸಂಖ್ಯೆಯಲ್ಲಿ ಸೇರಿದ್ದ
ಕಾರ್ಯಕ್ರಮದಲ್ಲಿ ಮುರುಘರಾಜ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
