ಅಧಿಕೃತ ಮರಳು ಕ್ವಾರಿಗಳನ್ನು ಚಾಲನೆ ಮಾಡಿ

ಜಿಲ್ಲಾಡಳಿತ, ತಾಲೂಕು ಆಡಳಿತ, ಭೂ, ಗಣಿ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಜವಾಬ್ದಾರಿ ಮರೆತಿವೆ
ಆಗುಂಬೆ ಪೊಲೀಸ್ ಇಲಾಖೆ ಜಾಗದಿಂದ 1600 ಲೋಡ್ ಮಣ್ಣು ಕಳವು ಕ್ರಮ ಏಕಿಲ್ಲ..? - ನಿವೃತ್ತ ಎಸ್ ಪಿ ಕಾಶಿ
ತೀರ್ಥಹಳ್ಳಿಯಲ್ಲಿ ಅಧಿಕೃತವಾಗಿ 13 ಮರಳು ಕ್ವಾರಿಗಳಿದ್ದು ಎಲ್ಲವನ್ನು ಕಾನೂನು ಬದ್ದವಾಗಿ ಚಾಲನೆಗೊಳಿಸಿದಲ್ಲಿ ಮರಳು ಅಕ್ರಮ ತಡೆಗಟ್ಟಬಹುದು. ಅದನ್ನು ಮಾಡದೆ ಕೇವಲ ಕೇಸು ಹಾಕುವ ಮೂಲಕ ನಿರುದ್ಯೋಗಿ ಯುವಕರನ್ನು ಅವಮಾನ ಮಾಡಲಾಗುತ್ತಿದೆ. ಇದರಿಂದ ಜನರಿಗೂ ಕಡಿಮೆ ದರದಲ್ಲಿ ಮರಳು ಲಭ್ಯವಾಗುತ್ತದೆ. ಆದರೆ ಈ ವ್ಯವಸ್ಥೆ ಸರಿಪಡಿಸಬೇಕಾದ ತಾಲೂಕು ಆಡಳಿತ, ಜನಪ್ರತಿನಿಧಿಗಳು ಸುಮ್ಮನಿರುವುದು ಆಶ್ಚರ್ಯಕರ ಇದು ಖಂಡನೀಯ ಎಂದು ನಿವೃತ್ತ ಎಸ್ ಪಿ ಕಾಶಿ ಹೇಳಿದ್ದಾರೆ.

ತೀರ್ಥಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಒಂದೇ ಸಲ ಎಲ್ಲ ಮರಳು ಕ್ವಾರಿಗಳನ್ನ ಚಾಲನೆ ಮಾಡದೇ ಇರುವುದರಿಂದ ಕೃತಕ ಅಭಾವ ಸೃಷ್ಟಿಯನ್ನು ಇಲಾಖೆ ಹಾಗೂ ತಾಲೂಕು ಆಡಳಿತವೇ ಪರೋಕ್ಷವಾಗಿ ಸೃಷ್ಟಿ ಮಾಡುತ್ತಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜಿನ ಪ್ರಕಾರ ತಿಂಗಳಿಗೆ 8 ಕೋಟಿ ನಷ್ಟ ಆಗುತ್ತಿದೆ. ಎಲ್ಲ ಲೆಕ್ಕ ಹಾಕಿದರೆ ಕನಿಷ್ಠ 6 ಸಾವಿರ ಜನರಿಗೆ ಉದ್ಯೋಗ ದೊರಕುತ್ತದೆ. ಆದರೆ ಭೂ ಗಣಿ ವಿಜ್ಞಾನ ಇಲಾಖೆ, ಜಿಲ್ಲಾ ಹಾಗೂ ತಾಲೂಕು ಆಡಳಿತ, ಪೊಲೀಸ್ ಇಲಾಖೆ ತಮ್ಮ ಜವಾಬ್ದಾರಿ ನಿಭಾಯಿಸದೆ ಯುವಕರಿಗೆ ಮರಳು ಗಳ್ಳರ ಪಟ್ಟ ಕಟ್ಟುತ್ತಿದೆ ಎಂದು ಆರೋಪಿಸಿದರು.

ಹೊಟ್ಟೆ ಪಾಡಿಗೆ ಮರಳು ಸಾಗಿಸುವರಿಗೆ ದಬಾವಣೆ ಮಾಡುವ ಪೊಲೀಸ್ ಇಲಾಖೆ ಆಗುಂಬೆ ಪೊಲೀಸ್ ಠಾಣೆಗೆ ಸೇರಿದ 10 ಎಕರೆ ಪ್ರದೇಶದಲ್ಲಿ ಗುತ್ತಿಗೆದಾರನೊಬ್ಬ 1600 ಲೋಡು ಮಣ್ಣು ಸಾಗಿಸಿದರು ಕಣ್ಣು ಮುಚ್ಚಿ ಕುಳಿತಿದೆ. ಬಡವರಿಗೆ ಮತ್ತು ಶ್ರೀಮಂತರಿಗೆ ಕಾನೂನು ಬೇರೆ ಇದೆಯಾ ಎಂದು ಕಾಶಿ ಪ್ರಶ್ನೆ ಮಾಡಿದರು.

ಸುದ್ದಿ ಗೋಷ್ಠಿಯಲ್ಲಿ ನಿವೃತ್ತ ಎಸ್ ಪಿ ಮಂಗಳ ನಟರಾಜ್, ಅಸಿಕೊಪ್ಪ ಮಹೇಶ್, ಕೋಣಂದೂರು ಪೂರ್ಣೇಶ್ ಇನ್ನಿತರರು ಉಪಸ್ಥಿತರಿದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post