ಕೆಸೆಟ್ ಪರೀಕ್ಷೆಯಲ್ಲಿ
ಅತ್ಯುತ್ತಮ ಸಾಧನೆ
ಸ್ವಂತ ಪರಿಶ್ರಮದಿಂದ
ಗಮನ ಸೆಳೆದ ಹುನೈನ ಪರ್ವೀನ್
ವಾಗ್ದೇವಿ ಶಾಲೆಯ
ವಿದ್ಯಾರ್ಥಿನಿ ಹುನೈನ ಪರ್ವೀನ್ ಇತ್ತೀಚೆಗೆ ನಡೆದ ಕೆಸೆಟ್-2026 ರ ಪರೀಕ್ಷೆಯಲ್ಲಿ ರಾಜ್ಯಕ್ಕೆ
7ನೇ ರ್ಯಾಂಕ್ ಪಡೆಯುವ ಮೂಲಕ ಮತ್ತೊಮ್ಮೆ ಉತ್ತಮ ಸಾಧನೆ ಮಾಡಿದ್ದಾರೆ. ಎಸ್‌ಎಸ್‌ಎಲ್‌ಸಿ ತನಕ ಸೆಂಟ್
ಮೇರಿಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಇವರು ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು
ಪಡೆಯುವ ಮೂಲಕ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದುಕೊಂಡಿದ್ದರು. ಪಿಯುಸಿಯಲ್ಲಿ ವಾಗ್ದೇವಿ ಶಾಲೆಯಲ್ಲಿ
ವ್ಯಾಸಂಗ ಮಾಡಿ 600ಕ್ಕೆ 593 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದು ಸಾಧನೆ
ಮಾಡಿದ್ದರು.
ವಿಶೇಷವೆಂದರೆ ಎಸ್‌ಎಸ್‌ಎಲ್ಸಿ,
ಪಿಯುಸಿಯಿಂದ ಕೆಸೆಟ್ ಪರೀಕ್ಷೆಯ ತನಕ ಈ ವಿದ್ಯಾರ್ಥಿನಿ ವಿಶೇಷ ಟ್ಯೂಷನ್ ತೆಗೆದುಕೊಳ್ಳದೆ ಸ್ವಂತ
ಪರಿಶ್ರಮದಿಂದ ಇಷ್ಟೆಲ್ಲ ಸಾಧನೆ ಮಾಡಿರುವುದು ಆಕೆಯ ಪ್ರತಿಭೆಗೆ ಸಾಕ್ಷಿಯಾಗಿದೆ. ಈ ಪ್ರತಿಭಾವಂತ
ವಿದ್ಯಾರ್ಥಿನಿ ಮಹಮ್ಮದ್ ಆಲಿ ಮತ್ತು ಆಯೇಶಾ ದಂಪತಿಗಳ ಪುತ್ರಿ.
