ವಕೀಲ ಪ್ರದೀಪ್ ಗೆ ಪಿತೃ ವಿಯೋಗ
ನಿವೃತ್ತ ಕೃಷಿ ಇಲಾಖೆ ನೌಕರ ಮತ್ತು ಕೃಷಿಕ ವಡೆಗದ್ದೆ ಕೃಷ್ಣಮೂರ್ತಿ (80) ಶುಕ್ರವಾರ ತೀರ್ಥಹಳ್ಳಿಯ ಸೀಬಿನಕೆರೆಯ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ ಪತ್ನಿ, ಪುತ್ರ ವಕೀಲ ನೋಟರಿ ಪ್ರದೀಪ್, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ ತೀರ್ಥಹಳ್ಳಿ ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ 10 ಗಂಟೆಗೆ ನಡೆಯಲಿದೆ.