ಸೆಮಿಫೈನಲ್‌ನಲ್ಲಿ
ಭರ್ಜರಿ ಪ್ರದರ್ಶನ ನೀಡಿದ ಆಟಗಾರರು
ಎದುರಾಳಿ ವಿರುದ್ಧ
16.1 ಓವರ್‌ನಲ್ಲಿ 111 ರನ್ ಗಳಿಕೆ

ತೀರ್ಥಹಳ್ಳಿಯ ಕ್ರಿಕೆಟ್ ಇತಿಹಾಸದಲ್ಲಿ ಸಿಟಿ ಕ್ರಿಕೆಟ್ ಕ್ಲಬ್ ಅಚ್ಚರಿಯ ಸಾಧನೆ ತೋರಿದೆ. 20 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಶಿವಮೊಗ್ಗ ಜೋನ್ ಫಸ್ಟ್ ಡಿವಿಜನ್ ಲೀಗ್ ಟೂರ್ನಮೆಂಟ್‌ನಲ್ಲಿ ಫೈನಲ್ ತಲುಪುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ.ಶಿವಮೊಗ್ಗದ ನವುಲೆ ಜೆಎನ್‌ಎನ್‌ಸಿ ಇಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ಭಾನುವಾರ ಸಿಟಿ ಕ್ರಿಕೆಟ್ ಕ್ಲಬ್ (CCC) ಮತ್ತು ಸಾಗರ ಸ್ಪೋರ್ಟ್ಸ್ ಅಕಾಡೆಮಿ (SSA) ನಡುವೆ ನಡೆಯಿತು. ಸಾಗರ ಸ್ಪೋರ್ಟ್ಸ್ ಅಕಾಡೆಮಿ 29.5 ಓವರ್‌ನಲ್ಲಿ 10 ವಿಕೆಟ್ ಪತನದೊಂದಿಗೆ 110 ರನ್‌ಗಳಿಸಿತ್ತು. ಅವರನ್ನು ಚೇಸ್ ಮಾಡಿದ ಸಿಟಿ ಕ್ರಿಕೆಟ್ ಕ್ಲಬ್ 16.1 ಓವರ್ನಲ್ಲಿ 2 ವಿಕೆಟ್‌ನೊಂದಿಗೆ 111 ರನ್ ಪಡೆಯುವ ಮೂಲಕ ವಿಜಯದ ಜಯಮಾಲೆ ತನ್ನದಾಗಿಸಿಕೊಂಡಿದೆ.
ಬೌಲಿಂಗ್ ಪ್ರದರ್ಶನ
ಸುನಿಲ್ ಸಿಂಗ್ 7-0-31-22-3
ನಾವಜ್ ಆಹ್ಮದ್ 4-0-17-25-2
ನಿಕ್ಷೇಪ ಖಾನಾಪುರ 5-1-22-7-3

