ಬಯೋಕಾನ್ ಕಂಪನಿಯ ಸಿ.ಎಫ್.ಓ. ಹುದ್ದೆ
ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀನಂದ ದಬ್ಬಣಗದ್ದೆ ನೇತೃತ್ವದಲ್ಲಿ ಸನ್ಮಾನ
ತೀರ್ಥಹಳ್ಳಿಯ ಪ್ರತಿಷ್ಠಿತ ತುಂಗಾ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ, ತೀರ್ಥಹಳ್ಳಿ ಮೂಲದ ಮುಕೇಶ್ ಕಾಮತ್ ದೇಶದ ಔಷಧ ಕ್ಷೇತ್ರದ ದಿಗ್ಗಜ ಸಂಸ್ಥೆ ಬಯೋಕಾನ್ ನೂತನ ಸಿ.ಎಫ್.ಓ ಹುದ್ದೆ ಅಲಂಕರಿಸಿದ್ದಾರೆ.
ತೀರ್ಥಹಳ್ಳಿ ಹಾಗೂ ತುಂಗಾ ಮಹಾವಿದ್ಯಾಲಯಕ್ಕೆ ಈ ಹುದ್ದೆ ಗೌರವ ತಂದಿದೆ. ಈಗಾಗಲೇ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಅನೇಕ ಗಣ್ಯರು ಅವರಿಗೆ ಶುಭಾಶಯ ಸಲ್ಲಿಸಿದ್ದಾರೆ.
ಶನಿವಾರ ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮುಕೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮುಕೇಶ್ ಅವರು ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು.
ತುಂಗಾ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಶ್ರೀನಂದಾ ದಬ್ಬಣಗದ್ದೆ, ಕಾರ್ಯದರ್ಶಿ ಯುವರಾಜ್, ಉಪಾಧ್ಯಕ್ಷೆ ಅಕ್ಷತಾ, ಖಜಾಂಚಿ ಭರತ್ ಕೋಡ್ಲು, ಕಾರ್ಯಕಾರಿ ಸದಸ್ಯರಾದ ಪೂರ್ಣೇಶ್ ಕೆಳಕೆರೆ, ರಜನಿ ಜೋಗಿ, ನಮ್ಮೂರ್ ಎಕ್ಸ್ ಪ್ರೆಸ್ ಮುಖ್ಯಸ್ಥ ರಾಘವೇಂದ್ರ ಇದ್ದರು.
