ತೀರ್ಥಹಳ್ಳಿ ಅಡಿಕೆ‌ ಬೆಳೆಗಾರರ ಸಂಘದ‌‌‌ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ಆಯ್ಕೆ

ತೀರ್ಥಹಳ್ಳಿ ತಾಲ್ಲೂಕು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಂಘದ ಆಡಳಿತ ಮಂಡಳಿ ಮೂರು ವರ್ಷ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದೆ.

ಉಪಾಧ್ಯಕ್ಷರಾಗಿ ಕಟ್ಟೇಗದ್ದೆ ಹಾಲಪ್ಪ, ಕಾರ್ಯದರ್ಶಿಯಾಗಿ ಜಿ.ಎಸ್. ನಾರಾಯಣ ರಾವ್ ಗುಡ್ಡೇಕೊಪ್ಪ, ಖಜಾಂಚಿ ಯು.ಎಸ್. ಶ್ರೀನಿವಾಸ ಗೌಡ ಕಡ್ತೂರು, ಸಹಕಾರ್ಯದರ್ಶಿಯಾಗಿ ಬಿ.ಎ. ಅರುಣಾಚಲ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಖಂಡಕ ಕೃಷ್ಣಮೂರ್ತಿ, ಸಿ.ಬಿ. ಈಶ್ವರ್ ಚಂದುವಳ್ಳಿ, ಜಿ.ಕೆ. ಮಂಜುನಾಥ್ ಭಟ್ ಕಾರಕೋಡು, ನಾಗರಾಜ ಶೆಟ್ಟಿ ಕೊಂಡ್ಲುಕೊಪ್ಪ, ಸಿ.ಆರ್. ವೆಂಕಟಪ್ಪಗೌಡ ಗೋವಿನಹಳ್ಳಿ, ಎ.ಆರ್. ಅರುಣಾ, ಕನ್ನಂಗಿ ಶೇಷಾದ್ರಿ, ಸತೀಶ್ ಕುಮಾರ್ ಸಿಂಧುವಾಡಿ, ಸಂದೀಪ್ ಡಿ ಕುಡುಮಲ್ಲಿಗೆ, ಎಸ್.ಎನ್. ದಿನೇಶ್ ಶೇಡ್ಗಾರು, ಕೆ.ವಿ. ಸತ್ಯಾನಾರಾಯಣರಾವ್ ಕೂಳೂರು, ಶಂಕರನಾರಾಯಣ ಐತಾಳ್ ನಗರವಳ್ಳಿ, ಪಿ.ಎಂ. ಮನುದೇವ್ ದೇವಂಗಿ, ಎಂ.ಜಿ. ನವೀನ್ ಹೆಗಡೆ ಮೇಗರವಳ್ಳಿ, ಕೆ.ಎಂ. ಶಿವಪ್ಪ ಕರಡಿಕೋಡು, ಎಸ್.ಎನ್. ರವಿರಾಜ ಹೆಬ್ಬಾರ್ ಆಯ್ಕೆಯಾಗಿದ್ದಾರೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post