ಸಹಕಾರಿ ವೇದಿಕೆಯಿಂದ ಬಿ.ಎಸ್. ವಿಶ್ವನಾಥ್ ಅವರಿಗೆ ಶ್ರದ್ಧಾಂಜಲಿ ಸಭೆ

"ಪ್ರಾಮಾಣಿಕತೆಗೆ ಬಿ.ಎಸ್. ವಿಶ್ವನಾಥ್ ರೋಲ್ ಮಾಡೆಲ್" – ಆರಗ
"ವಿಶ್ವನಾಥ್ ಸಾಂಸ್ಕೃತಿಕ ಸಾಹಿತ್ಯದ ರಾಯಬಾರಿ" - ಕಿಮ್ಮನೆ"
"ದೇಶದಾದ್ಯಂತ ಸಹಕಾರಿಗಾಗಿ ಕೋಟ್ಯಂತರ ಜಮೀನು ಮಾಡಿಸಿದ ಶ್ರೇಷ್ಟ ವ್ಯಕ್ತಿ" - ಬಸವಾನಿ ವಿಜಯದೇವ್
ವ್ಯವಸ್ಥೆಗೆ ಬೇಕಾದ ಶಿಸ್ತು, ಹೊಣೆಗಾರಿಕೆ ಜವಾಬ್ದಾರಿಯಿಂದ ಬಿ.ಎಸ್. ವಿಶ್ವನಾಥ್ ಕೆಲಸ ಮಾಡುತ್ತಿದ್ದರು. ಸಂಸ್ಥೆಗಳಲ್ಲಿ ನ್ಯೂನ್ಯತೆ ಆಗದಂತೆ ಜೋಪಾನ ವಹಿಸುತ್ತಿದ್ದರು. ಪ್ರಾಮಾಣಿಕತೆಗೆ ರೋಲ್ ಮಾಡೆಲ್ ಆಗಿದ್ದ ಅವರ ಕುರಿತು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕು ಎಂದು ಸೋಮವಾರ ಸಹಕಾರ ವೇದಿಕೆ ವತಿಯಿಂದ ಟಿಎಪಿಸಿಎಂಎಸ್ ಸಭಾಂಗಣದಲ್ಲಿ ಈಚೆಗೆ ಅಗಲಿದ ವಿಶ್ವ ಸಹಕಾರಿ, ಮಾಜಿ ಶಾಸಕ ಬಿ.ಎಸ್. ವಿಶ್ವನಾಥ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.1967ರಲ್ಲಿ ಶಾಂತವೇರಿ ಗೋಪಾಲಗೌಡರೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ನಂತರ ಅವರ ಜೀವನದ ದಿಕ್ಕು ಬದಲಿತು. ರಾಜಕೀಯೇತರವಾಗಿ ದೇಶದ ಸಹಕಾರಿ ವ್ಯವಸ್ಥೆ ಸಬಲವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೊಡ್ಡತನವನ್ನು ಪ್ರದರ್ಶಿಸದೆ ಕಿರಿಯರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದರು. ಆರಗದ ಕೇಶವಪುರ ದಾಸಶ್ರೇಷ್ಟ ಪುರಂದರದಾಸರ ಹುಟ್ಟೂರು ಎಂಬುದಕ್ಕೆ ಅನೇಕ ದಾಖಲೆಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಮೇರು ವ್ಯಕ್ತಿ ಎಂದು ತಿಳಿಸಿದರು.
“ವಿಶ್ವನಾಥ್ ತಾಲ್ಲೂಕಿನ ಸಾಂಸ್ಕೃತಿಕ ಸಾಹಿತ್ಯದ ರಾಯಬಾರಿಯಾಗಿದ್ದರು. ರಾಜ್ಯದ ಶ್ರೇಷ್ಟ ಕಲಾವಿದರು, ಸಂಗೀತಗಾರರು, ಚಿತ್ರನಟ, ನಟಿಯರನ್ನು ಆಹ್ವಾನಿಸ ಕಾರ್ಯಕ್ರಮ ನೀಡುತ್ತಿದ್ದರು. ಬೆಂಗಳೂರಿನ ಕಾಲೇಜು ದಿನಗಳಲ್ಲಿ ಅರೆಕಾಲಿಕ ಉದ್ಯೋಗ ಕೊಡಿಸುವಂತೆ ಕೇಳಿಕೊಂಡಿದ್ದೆ. ಆಗ ಅವರು ನೀನು ಸ್ಥಿತಿವಂತ ವಿದ್ಯಾಭ್ಯಾಸ ಮುಂದುವರೆಸುಂತೆ ಮಾರ್ಗದರ್ಶನ ನೀಡಿದ್ದರು” ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.
“ಸಹಕಾರಿ ವ್ಯವಸ್ಥೆಯ ಮರ್ಯಾದೆ ಹೆಚ್ಚಿಸುವಲ್ಲಿ ವಿಶ್ವನಾಥ್ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ, ಬೆಂಗಳೂರು, ಪೂನಾ ಸೇರಿದಂತೆ ದೇಶದಾದ್ಯಂತ ಸಹಕಾರಿ ವ್ಯವಸ್ಥೆಗೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನು ಮಂಜೂರು ಮಾಡಿಸಿದ್ದಾರೆ. ತೀರ್ಥಹಳ್ಳಿಯ ಸಹಕಾರಿ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ” ಎಂದು ಸಹಕಾರಿ ವೇದಿಕೆ ಅಧ್ಯಕ್ಷ ಬಸವಾನಿ ವಿಜಯದೇವ್ ಸ್ಮರಿಸಿಕೊಂಡರು.
ಶಿವಮೊಗ್ಗ ಎನ್ಇಎಸ್ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ಮಾಜಿ ತಾ.ಪಂ. ಅಧ್ಯಕ್ಷ ಕೆಸ್ತೂರು ಮಂಜುನಾಥ್ ನುಡಿನಮನ ಸಲ್ಲಿಸಿದರು.
ಸಬೆಯಲ್ಲಿ ಪ್ರಮುಖರಾದ ಡಿ.ಎಸ್. ವಿಶ್ವನಾಥ ಶೆಟ್ಟಿ, ಹಾರೋಗೊಳಿಗೆ ಪದ್ಮನಾಭ್, ಜೀನಾವಿಕ್ಟರ್ ಡಿಸೋಜ, ಮಮತಾ ಸಾಯಿನಾಥ್, ಲಕ್ಷ್ಮೀ, ತೂದೂರು ವನಜಾಕ್ಷಿ ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post