ಹೊನ್ನೇತ್ತಾಳು ಸಹಕಾರಿ ಸಂಘದಲ್ಲಿ ಅಪರೂಪದ ವಿದ್ಯಮಾನ

ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ರವೀಶ್‌
ರವೀಶ್‌ ಆರೋಪ ತೀರ ಬಾಲೀಶ ಹಾಗೂ ಬೇಜವಾಬ್ದಾರಿ ಎಂದ 9 ನಿರ್ದೇಶಕರು

ಇತ್ತೀಚೆಗೆ ಅವಿಶ್ವಾಸ ನಿರ್ಣಯದ ಮೂಲಕ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಹೊನ್ನೇತ್ತಾಳು ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಹೊನ್ನೇತ್ತಾಳು ರವೀಶ್‌ ಆ ಬಳಿಕ ಆ ಸಂಘದ ನಿರ್ದೇಶಕರಾಗಿದ್ದ ಹಸಿರುಮನೆ ಮಹಾಬಲೇಶ್‌ ಹಾಗೂ ಇತರರ ಮೇಲೆ ಹೇಳಿಕೆ ನೀಡಿದ್ದರು. ಅದಕ್ಕೆ ಹಸಿರುಮನೆ ಮಹಾಬಲೇಶ್‌ ಮತ್ತು ಉಳಿದವರು ನೀಡಿದ ಪ್ರತಿಕ್ರಿಯೆಯನ್ನು ಯಥಾವತ್ತಾಗಿ ನೀಡಲಾಗಿದೆ.

ಹಸಿರುಮನೆ ಮಹಾಬಲೇಶ್

ಹೊನ್ನೇತ್ತಾಳು ಸಹಕಾರ ಸಂಘದ ನಿರ್ದೇಶಕರಾಗಿ 5 ವರ್ಷಗಳ ಕಾಲ ಹಾಗೂ ಅಧ್ಯಕ್ಷರಾಗಿ 3 ವರ್ಷ ಕಾರ್ಯ ನಿರ್ವಹಿಸಿದ್ದ ರವೀಶ್‌ ವಾಸ್ತವವಾಗಿ ಬಹುಮತದ ಬೆಂಬಲ ಹೊಂದಿದ್ದ ಅಭ್ಯರ್ಥಿ ಆಗಿರಲಿಲ್ಲ. ಹಾಗಿದ್ದಾಗಲೂ ವಿಶ್ವಾಸ ಆಧಾರದ ಮೇಲೆ ತಾತ್ವಿಕವಾಗಿ ಅವರನ್ನು ವಿರೋಧಿಸುವ ನಿರ್ದೇಶಕರು ಕೂಡ ಅವರು ಅಧ್ಯಕ್ಷರಾಗಲು ಒಪ್ಪಿದ್ದರು. ಆದರೆ ಅಧ್ಯಕ್ಷರಾದ ಮೇಲೆ ಸದಾ ಕಾಲ ಏಕಪಕ್ಷೀಯ ನಿರ್ಧಾರಗಳು ಮತ್ತು ಉಳಿದ ನಿರ್ದೇಶಕರನ್ನು ತಾತ್ಸಾರವಾಗಿ ಕಾಣುವ  ಅವರ ಪ್ರವೃತ್ತಿಯಿಂದಲೇ ಅಂತಿಮವಾಗಿ ನವೆಂಬರ್‌ 21 ರಂದು ಅವರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲಾಗಿತ್ತು. 11 ನಿರ್ದೇಶಕರ ಮಂಡಳಿಯಲ್ಲಿ 9 ಜನ ಇವರ ವಿರುದ್ಧ ಮತ ಚಲಾಯಿಸಿದ್ದಾರೆ. ಆ ಬಳಿಕ ಅವರು ಅನಿವಾರ್ಯವಾಗಿ ಅವರು ರಾಜೀನಾಮೆ ನೀಡಬೇಕಾಯಿತು.

ನಂತರ ಸ್ಥಳೀಯ ದಿನಪತ್ರಿಕೆಯೊಂದರಲ್ಲಿ ಸಂಸ್ಥೆಯಲ್ಲಿ ಈ ಹಿಂದೆ ನಡೆಯಿತು ಎನ್ನಲಾದ ಹಣ ದುರುಪಯೋಗಕ್ಕೆ ಹಸಿರುಮನೆ ಮಹಾಬಲೇಶ್‌ ಮತ್ತು ಇತರರು ಕಾರಣ ಎನ್ನುವ ಅರ್ಥದಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿರುತ್ತಾರೆ. ಇದು ಖಂಡನೀಯ.

ರವೀಶ್

2015-16ರ ಲೆಕ್ಕ ಪರಿಶೋಧನೆಯಲ್ಲಿ ಕಂಡುಬಂದಂತೆ ದುರುಪಯೋಗಕ್ಕೆ ಕಾರಣರಾಗಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಅಮಾನತ್ತು ಮಾಡಿದ್ದಲ್ಲದೇ ಸ್ವತಃ ಮಹಾಬಲೇಶ್‌ ಅವರೆ ಆಗುಂಬೆ ಠಾಣೆಯಲ್ಲಿ 2019ರ ಮಾರ್ಚ್‌ 16 ರಂದು ದೂರು ದಾಖಲಿಸಿರುತ್ತಾರೆ. ಅಲ್ಲದೇ ಶಿವಮೊಗ್ಗ ಸಹಕಾರಿ ನಿಬಂಧಕರ ಕಚೇರಿಯಲ್ಲಿ ಅಕ್ಟೋಬರ್‌ 31, 2019ರಂದು ಸಿವಿಲ್‌ ದಾವೆಯನ್ನು ಕೂಡ ದಾಖಲಿಸಲಾಗಿತ್ತು. 32 ಜನರಿಗೆ ಬೆಳೆಸಾಲ ಒಂದೇ ವ್ಯಕ್ತಿಯ ಹೆಸರಿನಲ್ಲಿ 2 ಬಾರಿ ಸಾಲ ಮಂಜೂರು ಮಾಡಿರುವ ಬಗ್ಗೆ ಕೂಡ ಮಾಜಿ ಅಧ್ಯಕ್ಷ ರವೀಶ್‌ ಹತಾಶೆ ಹೇಳಿಕೆ ನೀಡಿದ್ದಾರೆ. ಈ ಎರಡೂ ಪ್ರಕರಣದಲ್ಲಿ ಸ್ವತಃ ರವೀಶ್‌ ಸಂಸ್ಥೆಯ ಪರವಾಗಿ ಹೇಳಿಕೆ ನೀಡಿರುತ್ತಾರೆ. 2015 ರಿಂದ 2017ರ ವರೆಗೆ ಯಾವುದೇ ರೀತಿಯ ಹೆಚ್ಚುವರಿ ಸಾಲ. ಹೊಸ ಸಾಲ ಡಿಸಿಸಿ ಬ್ಯಾಂಕ್‌ ನಿಂದ ಬಾರದ ಕಾರಣ ಹಿಂದಿನ ಅವಧಿಯ ಸಾಲಿನಲ್ಲಿ ಶೇರುದಾರ ಸದಸ್ಯರಿಗೆ ಎಷ್ಟು ಕೆಸಿಸಿ ಸಾಲ ನವೀಕರಣಗೊಂಡಿತ್ತೋ ಅಷ್ಟನ್ನು ಮಾತ್ರ ಆಡಳಿತ ಮಂಡಳಿ ನವೀಕರಿಸಿತ್ತು. ಈ ನಿರ್ಣಯಕ್ಕೂ ಕೂಡ ರವೀಶ್‌ ಸಹಿ ಮಾಡಿದ್ದರು. ಎಲ್ಲವೂ ಗೊತ್ತಿದ್ದು ರವೀಶ್‌ ಈ ರೀತಿ ಹೇಳಿಕೆ ನೀಡುತ್ತಿರುವುದು ಬೇಜವಾಬ್ದಾರಿ ಮಾತ್ರ ಅಲ್ಲ ಕಾನೂನು ಬಾಹೀರವೂ ಆಗಿದೆ.

ಹಗರಣಗಳ ಕಾರಣವೇ ಮುಚ್ಚಿ ಹೋಗಲಿದ್ದ ಸಂಸ್ಥೆಯನ್ನು ಮತ್ತೆ ಸಮರ್ಥವಾಗಿ ಮುನ್ನಡೆಸಿದ್ದು ಆಗ ಅಧ್ಯಕ್ಷರಾಗಿದ್ದ ಮಹಾಬಲೇಶ್‌ ಮತ್ತು ಅವರ ಆಲೋಚನೆಗೆ ಸೂಕ್ತವಾಗಿ ಸ್ಪಂದಿಸಿದ ನಿರ್ದೇಶಕ ಮಂಡಳಿ ವಜಾಗೊಂಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಡೆಯಿಂದ ಸೆಪ್ಟೆಂಬರ್‌ 20, 2016ರಂದು 30 ಲಕ್ಷದ 90 ಸಾವಿರದ 500 ರೂಪಾಯಿಗಳನ್ನು ಡಿಸಿಸಿ ಬ್ಯಾಂಕ್‌ ಚಾಲ್ತಿ ಖಾತೆಗೆ ಜಮಾ ಮಾಡಿಸಲಾಗಿದೆ. ಆ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ರವೀಶ್‌ ಅವರಿಗೆ 2016-17ನೇ ಸಾಲಿನ ಆಡಿಟ್‌ ಸರಿಪಡಿಸುವ ಜವಾಬ್ದಾರಿ ಇರಲಿಲ್ಲವೇ..? ಸದರಿ ಸಂಸ್ಥೆಗೆ ಗೊಬ್ಬರ, ಇಂಟರ್‌ಲಾಕ್‌, ಧ್ವಜಸ್ಥಂಬ, ಶೀಟ್‌ಗಳ ಛಾವಣಿಯನ್ನು ಮಾಡಿರುವುದು ಅವರೊಬ್ಬರಿಂದ ಅಲ್ಲ. ಇದರಲ್ಲಿ ಎಲ್ಲಾ ನಿರ್ದೇಶಕರ ಪರಿಶ್ರಮ ಹಾಗೂ ನಿರ್ಣಯ ಇದೆ. ಅಭಿವೃದ್ಧಿ ಹಾಗೂ ಸರ್ಕಾರದ ಹಿಂದಿನ ಅವಧಿಯ ಸಹಾಯಧನ 18 ರಿಂದ 20 ಲಕ್ಷ ಬಂದಿರುವುದರಿಂದ ಇದು ಸಾಧ್ಯವಾಗಿದೆ ಹೊರತು ಇದರಲ್ಲಿ ರವೀಶ್‌ ಅವರ ಪಾತ್ರ ಏನಿದೆ ಎಂದು ಹೇಳಲಿ.

ಸಂಸ್ಥೆಯ ಉಳಿವಿಗೆ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶ್ವಾಸವಿಟ್ಟ ಷೇರುದಾರ ಸದಸ್ಯರು, ತಾಲ್ಲೂಕಿನ ಎಲ್ಲಾ ಪಕ್ಷದ ರಾಜಕೀಯ ಮುಖಂಡರು, ಹಾಲಿ ಹಾಗೂ ಮಾಜಿ ಸಚಿವರು, ಅಪೆಕ್ಸ್‌ ಬ್ಯಾಂಕ್‌ ಮಾಜಿ ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌ ಅಧ್ಯಕ್ಷರು, ಹಾಲಿ ಡಿಸಿಸಿ ಬ್ಯಾಂಕ್‌, ಅಪೆಕ್ಸ್‌, ರಾಜ್ಯ ಭೂ ಬ್ಯಾಂಕ್‌ ನಿರ್ದೇಶಕರಾದ ವಿಜಯದೇವ್‌ ಮತ್ತು ಅವಿಶ್ರಾಂತವಾಗಿ ಕಾರ್ಯ ನಿರ್ವಹಿಸುತ್ತಿರುವು ಈಗಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಈ ಸಹಕಾರಿ ಸಂಘ ಮತ್ತೆ ಸರಿದಾರಿಗೆ ಬಂದಿದೆ. ಹಾಗಾಗಿ ಈಗ ಅಧಿಕಾರ ಕಳೆದುಕೊಂಡಿರುವ ರವೀಶ್‌ ಅವರ ಹೇಳಿಕೆಗೆ ಯಾರು ಕೂಡ ಮಹತ್ವ ನೀಡಬಾರದಾಗಿ ಹಸಿರುಮನೆ ಮಹಾಬಲೇಶ್‌ ಸೇರಿದಂತೆ 9 ನಿರ್ದೇಶಕರ ಸಹಿಯುಳ್ಳು ಪ್ರಕಟಣೆ ತಿಳಿಸಿದೆ.


ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post