ಗ್ರಾ.ಪಂ. ಸದಸ್ಯರ ಮುಂದೆ ರಸ್ತೆ ಕಿತ್ತ ಅಧಿಕಾರಿಗಳು

ರಾತ್ರಿ ರಷ್ಯಾಪಡೆ ದಾಳಿಗೆ ಕಾರ್ಮಿಕರು ತತ್ತರ
ಕಾರ್ಮಿಕರ ಕಾವಲಿಗೆ ಪ್ರಧಾನಿ ಭದ್ರತೆಯ ಕಮಾಂಡೋ ನೀಡಿ

ದುಷ್ಟಶಕ್ತಿಗಳ‌ ತಾಳಕ್ಕೆ ಕುಣಿಯಬೇಡಿ
ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಉದ್ದೇಶವೇನು...? ನಿಶ್ಚಲ್ ಜಾದೂಗಾರ್ ಪ್ರಶ್ನೆ

ಕುರುವಳ್ಳಿ, ಮೇಲಿನಕುರುವಳ್ಳಿಯಲ್ಲಿ ಕೈಗಳಿಂದ ಕಲ್ಲುಗಳನ್ನು ಒಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ಕೂಲಿ ಕಾರ್ಮಿಕರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಕಾರ್ಮಿಕರೇ ಹೆಚ್ಚಾಗಿರುವ ಈ ಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನಿಗಳು ರಷ್ಯಾಪಡೆ ದಾಳಿ ಮಾಡಿದಂತೆ ರಾತ್ರಿ 8 ಗಂಟೆಗೆ ರಸ್ತೆಗಳನ್ನು ಕಿತ್ತು ಹಾಳು ಮಾಡುತ್ತಿದೆ. ಅಲ್ಲದೇ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿರುವುದು ಯಾಕೆ ಎಂದು ಮೇಲಿನ ಕುರುವಳ್ಳಿ ಗ್ರಾಮ ಪಂಚಾಯತಿ ಸದಸ್ಯ ನಿಶ್ಚಲ್ ಜಾದೂಗಾರ್ ಪ್ರಶ್ನಿಸಿದ್ದಾರೆ.


ಗ್ರಾಮ ಪಂಚಾಯಿತಿಗೆ ಸೇರಿದ ರಸ್ತೆಗಳನ್ನು ಸ್ಥಳೀಯಾಧಿಕಾರಿಗಳಿಗೂ ಮಾಹಿತಿ ತಿಳಿಸದೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರ ಮುಂದೆಯೇ ಪಂಚಾಯಿತಿ ರಸ್ತೆಗಳನ್ನು ಕಿತ್ತು ಹಾಳು ಮಾಡಲಾಗುತ್ತಿದೆ. ದೀಪಾವಳಿ ಆರಂಭವಾಗುತ್ತಿದ್ದು ಚೌಡಿಬನದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ಇಂತಹ ಸಂದರ್ಭದಲ್ಲಿ ದಾಳಿಯಿಂದ ಭಕ್ತರಿಗೆ ತೊಂದರೆಯಾಗುತ್ತಿದೆ.


ಸರ್ವೆ ನಂಬರ್ 72ರಲ್ಲಿ ಕಲ್ಲುಬಂಡೆ ಗುತ್ತಿಗೆಗಾಗಿ ಡಿಡಿ, ಹಣ ಕಟ್ಟಿಸಿಕೊಂಡು ಯಾವುದೇ ಲೀಸ್ ಪ್ರಕ್ರಿಯೆ ಮಾಡದೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಕೂಲಿ ಕಾರ್ಮಿಕರ ಹಣ, ಭರವಸೆ ಹುಸಿಗೊಳಿಸಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಹಿಂದಿರುವ ದುಷ್ಟಶಕ್ತಿಗಳು ಯಾವುದು. ಭಾರತದ ಪ್ರಧಾನ ಮಂತ್ರಿಯವರ ಕನಸಿನ ಯೋಜನೆ ಸ್ಕಿಲ್ ಇಂಡಿಯಾವನ್ನು ಅಧಿಕಾರಿಗಳೇ ಕಿಲ್ ಮಾಡುತ್ತಿದ್ದಾರೆ. ಒಂದು ಜಿಲ್ಲೆ, ಒಂದು ವಸ್ತು (ಓಡಿಓಪಿ) ಯೋಜನೆ ಕಾರ್ಯರೂಪಕ್ಕೆ ತರುವಲ್ಲಿ ಅಧಿಕಾರಿಗಳು ಸೋತಿದ್ದಾರೆ. ಕಾರ್ಮಿಕರಿಗೆ ರಕ್ಷಣೆ ಕೊಡುವ ಯಾವುದೇ ಯೋಜನೆ ಜಲ್ಲಿ ಒಡೆಯುವವರಿಗೆ ತಲುಪದಂತೆ ವ್ಯವಸ್ಥಿತ ಷಡ್ಯಂತ್ರ ರಚನೆಗೊಂಡಿದೆ. ಇಲ್ಲಿಂದ ಸ್ಥಳೀಯ ನುರಿತ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಯಾಕೆ ಎಂದು ಗ್ರಾಮ ಪಂಚಾಯತಿ ‌ಸದಸ್ಯ ನಿಶ್ಚಲ್ ಜಾದೂಗಾರ್ ಪ್ರಶ್ನಿಸಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post