ಶನಿವಾರ ಹಿಂದೂ ಜಾಗರಣ
ವೇದಿಕೆ ಪ್ರತಿಭಟನೆ
ಕೊಲೆಗಾರರಿಗೆ ಜೈಲಿನಲ್ಲೇ ರಾಜಾತಿಥ್ಯ
ಹಿಂದೂಗಳಿಗೆ ರಕ್ಷಣೆ ನೀಡದ ಆರಗ ಜ್ಞಾನೇಂದ್ರ
ಹಿಂದುಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಗೃಹಸಚಿವ
ಆರಗ ಜ್ಞಾನೇಂದ್ರ ನೀಡಬೇಕೆಂದು ಶನಿವಾರ ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ
ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಸಹ ಸಂಯೋಜಕ ಸತೀಶ್ ದಾವಣಗೆರೆ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಪ್ಪನ
ಆಗ್ರಹಾರದಲ್ಲಿ ಹರ್ಷನ ಕೊಲೆ ಮಾಡಿದವರು ಮೊಬೈಲ್ ಬಳಸಿಕೊಂಡು ರಾಜ್ಯಾತಿಥ್ಯದಲ್ಲಿದ್ದಾರೆ. ಅವರಿಗೆ ಕಾನೂನಿನ ಭಯವೇ ಇಲ್ಲವಾಗಿದೆ. ಅಕಸ್ಮಾತ್ ಹೊರ ಬಂದರೆ ಅವರ ವರ್ತನೆ
ಹೇಗೆ ಇರಬಹುದು ಎಂದು ಪ್ರಶ್ನೆ ಕಾಡುತ್ತಿದೆ ಎಂದು ಅವರು ಹೇಳಿದ್ದಾರಲ್ಲದೇ ಉತ್ತರ
ಕರ್ನಾಟಕದಲ್ಲಿ ಹಿಂದೂಗಳ ಮೇಲೆ ಗೂಂಡಾಗಿರಿ ನಡೆದಿದೆ ಎಂದು
ದೂರಿದರು.
ಕೊಲೆಯಾದ ಹರ್ಷನ ಅಕ್ಕ ಅಶ್ವಿನಿ ಮಾತನಾಡಿ, ನನ್ನ ತಮ್ಮನ ಕೊಲೆಗಾರರಿಗೆ ಶಿಕ್ಷೆ ಆಗಬೇಕು. ಆಗಲೇ ನಮಗೆ ನೆಮ್ಮದಿ. ಆದರೆ, ಸರ್ಕಾರವೇ ನಮ್ಮನ್ನು ನಿರ್ಲಕ್ಷಿಸಿದೆ. ಅಲ್ಲದೇ, ಓರ್ವ ಹೆಣ್ಣು ಮಗಳ ಜೊತೆ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಸಹ ಗೃಹ ಸಚಿವರಿಗೆ ಇಲ್ಲ ಎಂಬುದು ನೋವಿನ ಸಂಗತಿ ಎಂದು ಹೇಳಿದರು.
