ಸಹನಾ (23 ) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವತಿ.ಈಕೆ ಕಾಪು ಕಟ್ಟಿಂಗೇರಿಯ ಅಕ್ಕನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ವಿಷ ಸೇವಿಸಿದ್ದ ಸಹನಾಳನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಹನಾ ಮೃತಪಟ್ಟಿದ್ದಾಳೆ.
ಒಂದು ವರ್ಷದ ಹಿಂದೆ ಮಂಗಳೂರಲ್ಲಿ ಎಂಬಿಎ ಮುಗಿಸಿದ್ದ ಸಹನಾ, ಉದ್ಯೋಗಕ್ಕಾಗಿ ಅಲೆದಾಡಿದ್ದಳು. ಆದರೆ, ಎಲ್ಲಿಯೂ ತನ್ನ ಅರ್ಹತೆಗೆ ತಕ್ಕ ಕೆಲಸ ಸಿಗದಿದ್ದರಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Tags:
ಆತ್ಮಹತ್ಯೆ