ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಸ್ಫೋಟಕ ಆಲ್‌ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕ್ವೀನ್ಸ್‌ಲ್ಯಾಂಡ್‌ನ ಟೌನ್ಸ್‌ವಿಲ್ಲೆ ಎಂಬಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಂಡ್ರೆ ಸ್ಯೆಮಂಡ್ಸ್ ಆಸ್ಟ್ರೇಲಿಯಾ ಕ್ರಿಕೆಟ್ ಸುವರ್ಣ ಕಾಲದ ಕೊಂಡಿಗಳಲ್ಲಿ ಒಬ್ಬರು. ರಿಕಿ ಪಾಂಟಿಂಗ್ ನಾಯಕತ್ವದ ತಂಡದಲ್ಲಿ ಪ್ರಮುಖ ಆಲ್ ರೌಂಡರ್ ಆಗಿ ಹೆಸರಗಿದ್ದರು. ಭಾರತದಲ್ಲಿ ಅವರು ಹೆಸರಾಗಿದ್ದು ಹರಭಜನ್ಸಿಂಗ್ ಜೊತೆಗಿನ ವಿವಾದದಿಂದ. ಐಪಿಎಲ್ ನಲ್ಲಿ ಕೂಡ ಆಡಿದ್ದಾರೆ.
ಇತ್ತೀಚಿಗಷ್ಟೇ ಸ್ಪಿನ್ ದಂತಕತೆ ಶೇನ್ ವಾರ್ನ್, ಹೆಸರಾಂತ ವಿಕೆಟ್ ಕೀಪರ್ ರಾಡ್ನಿ ಮಾರ್ಷ ನಿಧನದಿಂದ ಚೇತರಿಸಿ ಕೊಂಡಿರದ ಆಸ್ಟ್ರೇಲಿಯಾ ಕ್ರಿಕೆಟ್ಗೆ ಇದು ಮತ್ತೊಂದು ಅಘಾತ..
Tags:
ಕ್ರಿಕೆಟ್