ಅತ್ಯಧಿಕ ಮರಳು ಸಾಗಿಸುತ್ತಿದ್ದ ಲಾರಿ
ಕುಳಾವತಿಯಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು
ಎಪಿಎಂಸಿಯಲ್ಲಿ ಲಾರಿಯ ತೂಕ ಅಳತೆ
ನಿಲ್ಲದ ಆಳ ಗಣಿಗಾರಿಕೆ
ಕ್ರಮಕ್ಕೆ ಮುಂದಾದ ಪೊಲೀಸರು
ಮರಳು ಕ್ವಾರಿಗಳಲ್ಲಿ ಅತೀ ಹೆಚ್ಚು ತೂಕದ ಮರಳು ಸಾಗಾಣೆಯಾಗುತ್ತಿದೆ. ಆಳ ಗಣಿಗಾರಿಕೆ ಮೂಲಕ ಮೇಲಕ್ಕೆತ್ತಿದ ಹಸಿ ಮರಳು ಸಾಗಾಣೆಯಾಗುತ್ತಿದೆ. ಸರ್ಕಾರಕ್ಕೆ ವಂಚಿಸುವ ಇಂತಹ ಪ್ರಕರಣ ದಿನ ನಿತ್ಯ ವರದಿಯಾಗುತ್ತಿದೆ. ಭಾನುವಾರ ಕುಶಾವತಿಯಲ್ಲಿ ಪರಿಶೀಲಿಸಿದ 3 ಲಾರಿಗಳು ಆಂದಿನಿ, ಮಳಲೂರು ಕ್ವಾರಿಗಳಿಂದ ಬಂದಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಂಜೆಯ ವೇಳೆಗೆ ಅಧಿಕ ಬಾರದ ಮರಳು ಲಾರಿಗಳು ಕುಶಾವತಿ ಮಾರ್ಗವಾಗಿ ಜಿಲ್ಲೆ, ಹೊರ ಜಿಲ್ಲೆಗಳಿಗೆ ತಲುಪುತ್ತಿವೆ. ಭಾನುವಾರ ಬೆಳಗ್ಗೆಯಿಂದ ಬಾರೀ ಪ್ರಮಾಣದ ಮರಳು ಸಾಗಾಣೆಯಾಗಿದ್ದು, ಸಂಜೆ ಮೂರು ಲಾರಿಗಳನ್ನು ಅನುಮಾನದಿಂದ ಪಟ್ಟಣದ ಎಪಿಎಂಸಿ ವೇಯಿಂಗ್ ಮಷಿನ್ ನಲ್ಲಿ ಪರಿಶೀಲಿಸಿದಾಗ 30 ಟನ್ ಗೂ ಹೆಚ್ಚಿನ ತೂಕದ ಲಾರಿ ಸಾಗಿಸುತ್ತಿರುವುದು ಕಂಡು ಬಂದಿದೆ.
ಸರ್ಕಾರದ ನಿಯಮ ಮೀರಿ 3 ಲಾರಿಗಳ ಲೋಡ್ ಮಾಡಲಾಗಿದೆ. ಇದರ ಜೊತೆಗೆ ಜಿಪಿಎಸ್ ವ್ಯವಸ್ಥೆಯಲ್ಲೂ ದೋಷ ಕಂಡುಬಂದಿದೆ.
ಕಳ್ಳ ಸಾಗಾಣೆಯ ಬಹಿರಂಗವಾಗುತ್ತಿದ್ದಂತೆ ಲಾಭಿಗಳು ಆರಂಭವಾಗಿದೆ. ಪೊಲೀಸರು ಕೂಡ ತನಿಖೆ ಆರಂಭಿಸಿದ್ದು, ಕಳ್ಳ ಸಾಗಾಣೆ ಕುರಿತು ಕ್ರಮಕ್ಕೆ ಮುಂದಾಗಿದ್ದಾರೆ.
Tags:
ಮರಳು