ಮುಂಜಾನೆ 5 ಕ್ಕೆ ಮೈಕ್ ಮೂಲಕ ಅಜಾನ್ ಕೂಗದಿರಲು ಮುಸ್ಲಿಂ ಮುಖಂಡರ ತೀರ್ಮಾನ
ಸುಪ್ರೀಂ ಕೋರ್ಟ್ ಆದೇಶ ಪಾಲನೆಗೆ ಬದ್ಧ
ರಾಜ್ಯದ ಎಲ್ಲ ಮಸೀದಿಗಳಿಗೂ ಈ ನಿರ್ಧಾರ ಅನ್ವಯ
5 ಗಂಟೆಗೆ ಮೈಕ್ ಮೂಲಕ ಅಜಾನ್ ಕೂಗದಿರಲು ಮುಸ್ಲಿಂ ಧರ್ಮ ಗುರುಗಳು, ಮೌಲ್ವಿಗಳು, ಮತ್ತು ಮುಖಂಡರುಗಳ ಸಭೆ ನಿರ್ಧರಿಸಿದೆ. ಸುಪ್ರೀಂ ಕೋರ್ಟ್ ಇತ್ತೀಚಿಗೆ ಹೊರಡಿಸಿರುವ ಆದೇಶ ಪಾಲನೆಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಭೆ ತಿಳಿಸಿದೆ.
ಶರಿಯತ್-ಎ -ಹಿಂದ್ ಸಂಘಟನೆ ಈ ವಿಚಾರದ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಈ ಕುರಿತು ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ ಎಂದು ಈ ಸಂಘಟನೆ ಅಮೀರ್ -ಎ -ಶರಿಯತ್ ಆಗಿರುವ ಮೌಲಾನ ಸಗೀರ್ ಅಹಮದ್ ಹೇಳಿದ್ದಾರೆ. ಅವರ ಅಧ್ಯಕ್ಷತೆ ಯಲ್ಲಿ ಕಳೆದ ಶನಿವಾರ ಈ ಸಭೆ ನಡೆದಿದೆ.
ಈ ನಿರ್ಧಾರ ರಾಜ್ಯದ ಎಲ್ಲ ಮಸೀದಿಗಳಿಗೂ ಅನ್ವಯ ಆಗಲಿದೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಇನ್ನು ಮುಂದೆ ಬೆಳಿಗ್ಗೆ 5ಕ್ಕೆ ಅಜಾನ್ ಕೂಗುವುದಿಲ್ಲ ಉಳಿದ ಸಮಯದಲ್ಲಿ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಮಾರ್ಗ ಸೂಚಿ ಪ್ರಕಾರವೇ ನಡೆದುಕೊಳ್ಳಲಾಗುವುದು ಮುಸ್ಲಿಂರು ಕಾನೂನಿಗೆ ಬೆಲೆ ಕೊಡುವುದಿಲ್ಲ ಎಂದು ಅಪಪ್ರಚಾರ ಮಾಡಲಾಗಿದೆ ಆದರೆ ಈ ನೆಲದ ಕಾನೂನಿಗೆ ಮುಸ್ಲಿಂರು ಅಪಾರ ಗೌರವ ನೀಡುತ್ತಾರೆ ಎಂದು ಉಮರ್ ಷರೀಫ್ ಹೇಳಿದ್ದಾರೆ.
ಬೆಳಿಗ್ಗೆ 5ಕ್ಕೆ ಅಜಾನ್ ಕೂಗುವುದು ಪ್ರಾರ್ಥನೆ ಅಲ್ಲ ಅದು ಪ್ರಾರ್ಥನೆಗೆ ನೀಡುವ ಕರೆ. ಅಜಾನ್ ಗೆ ಸುಪ್ರೀಂ ಕೋರ್ಟ್ ಅಥವಾ ಸರ್ಕಾರ ಅಸಮ್ಮತಿ ಸೂಚಿಸಿಲ್ಲ ಪ್ರಾರ್ಥನೆಗೆ ಮೈಕ್ ಮೂಲಕ ಕರೆ ನೀಡುವುದು ಅನಿವಾರ್ಯ ಅದನ್ನು ಬೆಳಿಗ್ಗೆ 6ರ ನಂತರ ಸರ್ಕಾರದ ಮಾರ್ಗ ಸೂಚಿ ಪ್ರಕಾರವೇ ಮಾಡಲಾಸಗುವುದು ಎಂದು ರಾಜ್ಯ ವಖ್ಫ್ ಮಂಡಳಿ ಅಧ್ಯಕ್ಷ ಮಹಮ್ಮದ್ ಶಫಿ ಸಾ ಹೇಳಿದ್ದಾರೆ.
Tags:
ಆಜಾನ್