ಬಸವಾನಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಸಿಹಿ ಹಂಚಿದ ಶಾಲಾಭಿವೃದ್ದಿ ಸಮಿತಿ, ಗಣ್ಯರು
ಶೈಕ್ಷಣಿಕ ಚಟುವಟಿಕೆ ಮಾಹಿತಿ ನೀಡಿದ ಮುಖ್ಯೋಪಾಧ್ಯಾಯರು2022-23ರ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 16 ರಂದು ಬಸವಾನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ, ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಉತ್ಸಾಹದಿಂದ ಬರಮಾಡಿಕೊಂಡರು.
ಮುಖ್ಯ ಅತಿಥಿ ಗ್ರಾಮ ಪಂಚಾಯ್ತಿ ಸದಸ್ಯ ಶ್ರೀದೀಪ ಜಿ.ಎನ್. ಮಕ್ಕಳಿಗೆ ಶುಭ ಕೋರಿದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುಮ ಶೈಕ್ಷಣಿಕ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಆಟೋಟ ನಂತರ ಒಂದು ವಾರ ಪೂರಕ ಚಟುವಟಿಕೆ, ತಿಂಗಳ ಕೊನೆ ವಾರದಲ್ಲಿ ಹಿಂದಿನ ಸಾಲಿನ ಪಠ್ಯದ ಪುನರಾವರ್ತನೆ ಮಾಡಲಾಗುತ್ತದೆ. ಮುಂದಿನ ತಿಂಗಳಿಂದ ಹೊಸ ಪಠ್ಯ ಪ್ರಾರಂಭ ಎಂದು ಮಾರ್ಗದರ್ಶನ ನೀಡಿದರು. ಸಭಾಧ್ಯಕ್ಷ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಬಿ.ಕೆ.ಉದಯ ಕುಮಾರ ಹೊಸ ಶೈಕ್ಷಣಿಕ ವರ್ಷಕ್ಕೆ ಶುಭ ಕೋರಿದರು. ವಿದ್ಯಾರ್ಥಿಗಳು ಮುಂಜಾನೆ ಓದುವುದರಿಂದ ಜ್ಞಾನದ ಹೆಚ್ಚುತ್ತದೆ. ಸಹಪಾಠಿಗಳೊಂದಿಗೆ ಶಿಸ್ತು, ಸಂಯಮ ಪಾಲಿಸುವ ಮಕ್ಕಳಿಗೆ ಬಹುಮಾನ ನೀಡುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯ ಬಿ.ಬಿ. ಭಾರತೀಶ್, ಸುಮಯ್ಯ, ಶಿಕ್ಷಕಿಯರಾದ ಮಮತ ಕುಮಾರಿ, ಅನುರಾದ ಉಪಸ್ಥಿತರಿದ್ದರು. ತಳಿರು ತೋರಣಗಳಿಂದ ಶೃಂಗರಿಸಿ ಮಕ್ಕಳಿಗೆ ಗುಲಾಬಿ ಹೂವು ಹಾಗೂ ಚಾಕಲೇಟ್ ನೀಡಿ ಶಾಲೆಗೆ ಬರಮಾಡಿಕೊಂಡರು.ಪ್ರಥಮ ವರ್ಷದ ತರಗತಿಗೆ ಪ್ರವೇಶ ಪಡೆದ ಮಕ್ಕಳಿಂದ ಜೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಲಾಯಿತು.
Tags:
ಪ್ರಾರಂಭೋತ್ಸವ