ಶಿವಮೊಗ್ಗದ ಸಂಪುಟ ಸಂಕಟ..!

ಬಿ.ಕೆ. ಹರಿಪ್ರಸಾದ್ ಭೇಟಿಯಾದ ಆರ್.ಎಂ.ಎಂ. - ಬೇಳೂರು..!!
ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಚಿವ ಸ್ಥಾನ ಸಿಗದೇ ರಾಜೀನಾಮೆ ಮಾತನಾಡಿದ್ದ ಸಾಗರ ಶಾಸಕರ ಬೇಳೂರು ಗೋಪಾಲಕೃಷ್ಣ ಇಂದು ಆರ್‌.ಎಂ. ಮಂಜುನಾಥ ಗೌಡರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.

ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಿದ್ದಂತೆ ನೂತನ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಿಕ್ಷಣ ಸಚಿವರಾಗಿದ್ದ ಮಧು ಬಂಗಾರಪ್ಪಗೆ ಸರ್ಕಾರ ರಚನೆಯ ವೇಳೆ ಅವಕಾಶ ಸಿಕ್ಕಿರಲಿಲ್ಲ. ಹಾಗಾಗಿ ಜಿಲ್ಲೆಯಿಂದ ಬೇಳೂರು, ಬಿ.ಕೆ.ಸಂಗಮೇಶ್ ಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಬಗ್ಗೆ  ರಾಜಕೀಯ ವಲಯದಲ್ಲಿ ಚರ್ಚೆ ಆಗಿತ್ತು.

ಜಿಲ್ಲೆಯ ಅನೇಕ ರಾಜಕೀಯ ಬೆಳವಣಿಗೆಯಿಂದಾಗಿ ಇದೀಗ ಜಿಗ್ರಿ ದೋಸ್ತ್ ಆಗಿರುವ ಕಾರಣ ಬೇಳೂರು ಪರವಾಗಿ ಆರ್.ಎಂ.ಎಂ.‌ ಜೋರಾಗಿ ಬ್ಯಾಟಿಂಗ್ ಮಾಡುತ್ತಿದ್ದದು ಗುಟ್ಟಾದ ವಿಚಾರವೇನಲ್ಲ.
ಅದಕ್ಕೆ ಸರಿಯಾಗಿ ಈ ಹಿಂದೆ ನಡೆದ ಲೋಕಸಭಾ ಚುನಾವಣೆ ವಿಚಾರದಲ್ಲಿ ಕುಮಾರ್ ಬಂಗಾರಪ್ಪರನ್ನು ಶಿವಮೊಗ್ಗ ಜಿಲ್ಲಾ ಅಭ್ಯರ್ಥಿಯಾಗಿ ಘೋಷಿಸಬೇಕೆಂದು ಡಿ.ಕೆ.ಶಿವಕುಮಾರ್ ನಡೆಸಿದ ಪ್ರತ್ನ ವಿಫಲವಾಗಿತ್ತು. ಮಧು ಬಂಗಾರಪ್ಪ ಬೆಲೆ ನೀಡದ ಕಾರಣಕ್ಕೆ ಶಿವಕುಮಾರ್ ಮುನಿಸಿಕೊಂಡಿದ್ದಾರೆ. ಆ ಕಾರಣದಿಂದ ಈ ಬಾರಿ ಸಚಿವ ಸ್ಥಾನ ಕಷ್ಟ ಎನ್ನುವ ಅಭಿಪ್ರಾಯಗಳೂ ಚಾಲ್ತಿಯಲ್ಲಿದ್ದವು.

ಹಾಗಾಗಿ ಬೇಳೂರಿಗೆ ಈಡಿಗ ಸಮುದಾಯದ ಕೋಟಾದಲ್ಲಿ ಅವಕಾಶ ದೊರೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಅವರ ನಿರೀಕ್ಷೆ ಹುಸಿಯಾಗಿ ಮತ್ತೆ ಮಧು ಬಂಗಾರಪ್ಪ ಮಂತ್ರಿಯಾಗಿದ್ದಾರೆ. ಅಲ್ಲಿಗೆ ಮಂತ್ರಿಯಾಗುವ ಕನಸು ಸದ್ಯ ಮುಂದೂಡಲ್ಪಟ್ಟಿದೆ. ಇಲ್ಲಿ ಬೇಳೂರು ಅವರ ಪ್ರಯತ್ನ ಮತ್ತು ಪ್ರಭಾವಕ್ಕಿಂತಲೂ ಮಧು ಅವರಿಗೆ ಮಾಜಿ ಸಿಎಂ ಬಂಗಾರಪ್ಪ ಅವರ ಹೆಸರೇ ವರದಾನ ಆದಂತಿದೆ. ಏಕೆಂದರೆ ಈಡಿಗ ಸಮುದಾಯ ಈಗಲೂ ಪಕ್ಷತೀತವಾಗಿ ತಮ್ಮ ಅಸ್ಮಿತೆ ಎಂದು ಒಪ್ಪಿರುವುದು ಬಂಗಾರಪ್ಪ ಅವರನ್ನೇ.

ಹಾಗಿರುವಾಗ ಮಧು ಅವರಿಗೆ ಅವಕಾಶ ನೀಡದೇ ಬೇಳೂರು ಅವರಿಗೆ ನೀಡಿದರೆ ಮುಂದಿನ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆಯಲ್ಲಿ ವ್ಯತೀರಿಕ್ತ ಪರಿಣಾಮ ಉಂಟಾಗಿ ಸಮುದಾಯದ  ಬೆಂಬಲ ದೊರಕದೆ ಹೋದರೆ ಕಷ್ಟ ಎನ್ನುವ ಅಭಿಪ್ರಾಯಕ್ಕೆ ಹೈಕಮಾಂಡ್ ಬಂದ ಹಾಗಿದೆ.
ಹಾಗೂ ಮುಂದೆ ಕುಮಾರ್ ಬಂಗಾರಪ್ಪ ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಬೇಳೂರು ಬೇಸರದಿಂದ ರಾಜೀನಾಮೆ ನೀಡುವ ಮಾತಾಡಿದ್ದರು. ಆದರೆ ಶಿವಕುಮಾರ್ ಯಾರೇ ರಾಜೀನಾಮೆ ನೀಡಿದರೂ ತಕ್ಷಣವೇ ಅಂಗಿಕಾರ ಮಾಡುವ ಹೇಳಿಕೆ ನೀಡಿರುವುದು ಬೇಳೂರು ಬೇಗುದಿ ಹೆಚ್ಚುವಂತೆ ಮಾಡಿದೆ.

ಆರ್ ಎಂ ಎಂ ಬೇಳೂರಿಗೆ ಮಂತ್ರಿಗಿರಿ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ  ಅ ಮೂಲಕ ತೀರ್ಥಹಳ್ಳಿಯ ವಿಧಾನಸಭಾ ಟಿಕೆಟ್ ಪಡೆಯುವ ಆಲೋಚನೆಯಲ್ಲಿದ್ದು ಮಧು ಬೆಂಬಲ ಸಿಗದಿದ್ದರು ಬೇಳೂರು ಬೆಂಬಲದಿಂದ ಈಡಿಗ ಸಮುದಾಯದ ಮತಬ್ಯಾಂಕ್ ಗಿಟ್ಟಿಸಿಕೊಳ್ಳುವ ದೂ ರಾಲೋಚನೆಗೆ ಹಿನ್ನಡೆಯಾಗಿದೆ.
 
 ವಾರದ ಹಿಂದಷ್ಟೇ ಕಿಮ್ಮನೆ ರತ್ನಾಕರ್ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂದು ಮಧು ಬಂಗಾರಪ್ಪ ಪ್ರಬಲವಾಗಿ ಬೆನ್ನಿಗೆ ನಿಂತಿದ್ದರು.
  ನಂತರ ಮಧು  ಮಂತ್ರಿಯಾದರು. ಎಲ್ಲಾ ತಂತ್ರಗಳು ಫಲ ನೀಡಿದರೆ ಕಿಮ್ಮನೆ ರತ್ನಾಕರ್ ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಲಿದ್ದಾರೆ. ಹಾಗೇನಾದರು ರಾಜಕೀಯ ಬದಲಾವಣೆ ಸೃಷ್ಟಿಯಾದರೆ ಬೇಳೂರು, ಆರ್ ಎಂಎಂ ಹಿಂದೆ ಸುತ್ತುತ್ತಿದ್ದ ತ್ರಿಶಂಕು ನಾಯಕರು ಇನ್ನು ಮುಂದೆ ಕಿಮ್ಮನೆ ಮನೆಗೆ ಹಾಜರಾಗುವ ಎಲ್ಲ ಲಕ್ಷಣಗಳು ಕಾಣ ತೊಡಗಿವೆ.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post