ರತ್ನಕುಮಾರಿಗೆ ರಾಷ್ಟ್ರೀಯ
ಉತ್ತಮ ಶಿಕ್ಷಕಿ ಗೌರವ
ರಾಷ್ಟ್ರಪತಿ ದ್ರೌಪದಿ
ಮುರ್ಮು ಅವರಿಂದ ಪ್ರಶಸ್ತಿ ಪ್ರದಾನ
ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪ್ರಕಟಿಸಿರುವ 'ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ-2026' ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ ಆಯ್ಕೆಯಾದ 48 ಅತ್ಯುತ್ತಮ ಶಿಕ್ಷಕರಲ್ಲಿ ಅವರು ಒಬ್ಬರಾಗಿದ್ದಾರೆ. ಶಿಕ್ಷಕರ ದಿನಾಚರಣೆಯಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಈ ಪ್ರತಿಷ್ಠಿತ ಪ್ರಶಸ್ತಿ ರತ್ನಕುಮಾರಿ ಅವರಿಗೆ ಪ್ರದಾನವಾಗಲಿದೆ.
ಜಿಲ್ಲೆಯ ಕ್ರಿಯಾಶೀಲ
ಹಾಗೂ ಪ್ರತಿಭಾವಂತ ಶಿಕ್ಷಕಿಯರಲ್ಲಿ ಒಬ್ಬರಾಗಿರುವ ರತ್ನಕುಮಾರಿ ಮೂಲತಃ ಕುರುವಳ್ಳಿ ಬೊಮ್ಮರಸಯ್ಯ
ಅಗ್ರಹಾರ ವಾಸಿಗಳಾದ ತೀರ್ಥಹಳ್ಳಿಯ ಮಾರಿಕಾಂಬಾ ದೇವಸ್ಥಾನದ ಪ್ರಧಾನ ಅರ್ಚಕರಾದ ಲಕ್ಷ್ಮೀ ನರಸಿಂಹ
ಐತಾಳ್, ವಿಶ್ವನಾಥ್ ಐತಾಳ್ ರವರ ಕಿರಿಯ ಸಹೋದರಿ.
.jpeg)