ಅರ್ಧದಷ್ಟು ಬೆಲೆಗೆ
ಭೂಮಿ ಕೊಡಲು ಅಲ್ಲಿನ ರೈತರು ಸಿದ್ಧರಿದ್ದಾರೆ
ತನಿಖೆಗೆ ಕಾಂಗ್ರೆಸ್
ಮುಖಂಡ ಅಮ್ರಪಾಲಿ ಸುರೇಶ್ ಆಗ್ರಹ
1939ರ ನವೆಂಬರ್
8 ರಂದು ಅಂದಿನ ಜಿಲ್ಲಾಧಿಕಾರಿ ಶೇಷಾದ್ರಿ ಅವರು ಮಲೆನಾಡಿನ ಅಡಿಕೆ ಬೆಳೆಗಾರರು ಹಾಗು ರೈತರ ಹಿತದೃಷ್ಟಿಯನ್ನು ಕಾಪಾಡುವ ಉದ್ದೇಶದಿಂದ ಮ್ಯಾಮ್ಕೋಸ್ ಸಂಸ್ಥೆ ಪ್ರಾರಂಭಿಸಿದರು. ಕೇವಲ 659 ಸದಸ್ಯರನ್ನು
ಹೊಂದಿದ್ದ ಸಂಸ್ಥೆ ರೈತರ, ಅಡಿಕೆ ಬೆಳೆಗಾರರಿಗೆ ಅನುಕೂಲ ಹಾಗೂ ಪಾರದರ್ಶಕ ಆಡಳಿತ ನೀಡುತ್ತಲೆ ಬಂದಿತ್ತು. ಕ್ರಮೇಣ ಈ
ಸಂಸ್ಥೆಯಲ್ಲಿ ರಾಜಕೀಯ ಪಕ್ಷ ಹಾಗೂ ರಾಜಕೀಯ ತತ್ವ ಸಿದ್ದಾಂತ ಹೊಂದಿರುವ ಸಂಘಟನೆ ಸಹಕಾರಿ ಹೆಸರಲ್ಲಿ ಆಡಳಿತ ನಡೆಸಲು ಯಶಸ್ವಿಯಾದರು.
ಈಗ ಸಂಸ್ಥೆಯು 36000 ಸಾವಿರಕ್ಕೂ
ಅಧಿಕ ಷೇರುದಾರರನ್ನು ಹೊಂದಿದ್ದು ಸಾವಿರಾರು ಕೋಟಿಯ ವ್ಯವಹಾರ ವಹಿವಾಟು
ನಡೆಸುತ್ತಿದೆ. ಇದಕ್ಕೆ ಕಾರಣ ಮ್ಯಾಮ್ಕೋಸ್ ಸಂಸ್ಥೆಯ ಮೇಲಿರುವ ರೈತರ
ನಂಬಿಕೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿ ವಹಿಸಲೇಬೇಕು. ಮಹೇಶ್ ಹುಲ್ಕುಳಿಯವರು ನನಗೆ ತಿಳಿದಂತೆ ದಕ್ಷ
ಆಡಳಿತಗಾರರು ಎಂದು ಭಾವಿಸಿದ್ದೇನೆ. ಅವರ ಅರಿವಿಗೆ ಬಂದೋ ಬಾರದೆಯೋ
ಕೋಟ್ಯಾಂತರ ರೂಪಾಯಿ ಹಗರಣ ನಡೆದಿದೆ ಎಂದರೆ ಆಶ್ಚರ್ಯವಾಗುತ್ತದೆ.
ಮ್ಯಾಮ್ಕೋಸ್ ಸಂಸ್ಥೆಯ ತೀರ್ಥಹಳ್ಳಿ ಶಾಖೆಗೆಂದು ಕಿತ್ತನೆಗದ್ದೆ
ಗ್ರಾಮದಲ್ಲಿ 62000 ಅಡಿ
ಜಾಗವನ್ನು ಖಾಸಗಿ ವ್ಯಕ್ತಿಗಳಿಂದ ಪ್ರತಿ ಅಡಿಗೆ 1,150 ರೂ ಗೆ
ಖರೀದಿ ಮಾಡಿರುತ್ತಾರೆ. ಕೊಂಡವರು ಹಾಗೂ
ಮಾರುವವರು ಶಾಸಕರು ಹಾಗೂ ಸಂಸದರ ಅಪ್ತರಾಗಿದ್ದಾರೆ. ಅವರಿಬ್ಬರು ಅಡಿಕೆ ಬೆಳೆಗಾರರ ಬಗೆಗೆ ಅತೀವ ಕಾಳಜಿ ಹೊಂದಿದ್ದು ರೈತರ ಹಿತಾಸಕ್ತಿಗಾಗಿ
ಮುಖ್ಯಮಂತ್ರಿ, ಕೇಂದ್ರ ಮಂತ್ರಿಗಳ ಬಳಿ ನಿಯೋಗದೊಂದಿಗೆ
ತೆರಳಿರುತ್ತಾರೆ. ಈಗ ಮ್ಯಾಮ್ಕೋಸ್ ಸಂಸ್ಥೆ ಖರೀದಿಸಿರುವ ಜಾಗದ
ಪಕ್ಕದಲ್ಲಿ ಹೈವೇ ಬೈಪಾಸ್ ರಸ್ತೆ ಹಾದು ಹೋಗುವುದು ಅದರಿಂದ ರಸ್ತೆಗೆ ಸುಮಾರು ಅರ್ಧ ಪಾಲು ಜಾಗ
ಬಿಟ್ಟು ಕೊಡಬೇಕಾಗಿ ಬರುತ್ತದೆ ಇದರಿಂದ ರೈತರಿಗೆ ಶೇರುದಾರರಿಗೆ ಅನ್ಯಾಯವಾಗುವುದಿಲ್ಲವೇ ಎಂಬ
ಪ್ರಶ್ನೆ ನನ್ನದು.
ಅದೇ ಜಾಗದ ಆಸುಪಾಸಿನ ಜಾಗಗಳು ಇದರ ಕಾಲುಭಾಗದ ಮೊತ್ತದಲ್ಲಿ
ಖರೀದಿಸಲಾಗಿದೆ. ನಮ್ಮ ಪ್ರಕಾರ ಈ ಜಾಗ ಖರೀದಿ ಪ್ರಕ್ರಿಯೆಯಲ್ಲಿ ಸುಮಾರು 5 ರಿಂದ 6 ಕೋಟಿಗಳಷ್ಟು ಹೆಚ್ಚುವರಿ ಮೊತ್ತ ಪಾವತಿಯಾಗಿದೆ ಎಂದು ಷೇರುದಾರರು
ಹಾಗೂ ರೈತರ ಆರೋಪವಾಗಿದೆ. ಅಸುಪಾಸು ಅಡಿಗೆ 250 ರೂಪಾಯಿ ಬೆಲೆ ಬಾಳುವ
ಜಾಗವನ್ನು 500 ರೂಪಾಯಿ
ಅಡಿಯ ಮೊತ್ತಕ್ಕೆ ಒಟ್ಟು ಐದು ಎಕರೆ ಜಾಗವನ್ನು ತೀರ್ಥಹಳ್ಳಿಯ ಅನೇಕ ಮಂದಿಯು ಕೊಂಡಿದ್ದಾರೆ. ಅದರಲ್ಲಿ ಮ್ಯಾಮ್ಕೋಸ್ ಸಂಸ್ಥೆಗೆ ಸನ್ನಿವಾಸ ಎಂಬ ಹೆಸರಿನ ಸಂಸ್ಥೆ ಮೂಲಕ 1,150 ರೂಪಾಯಿ ಅಡಿಗೆ ಮಾರಾಟ
ಮಾಡಿದ್ದು ಇದೇ ಜಾಗದ ಅತಿಸಮೀಪದಲ್ಲಿ ಸುಮಾರು 40 ಅಡಿ ರಸ್ತೆ
ಉಳ್ಳ ಭೂ ಪರಿವರ್ತನೆಗೊಂಡ ಜಾಗ ಈಗ ಖರೀದಿಸಿದ ಮೊತ್ತದ ಅರ್ಧದ ಬೆಲೆಗೆ ಮಾರಾಟ ಮಾಡಲು ವ್ಯಕ್ತಿಯೊಬ್ಬರು
ಸಿದ್ದರಿದ್ದು ಸಂಸ್ಥೆಯ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಹಾಗೂ ಷೇರುದಾರರು ಇದನ್ನು ಗಮನಿಸಿ ಚರ್ಚಿಸಿ ನಿರ್ಧಾರಕ್ಕೆ
ಬರಬೇಕಾಗಿ ರೈತರ ಪರವಾಗಿ ವಿನಂತಿಸುತಿದ್ದೇನೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ
ಕವಳಿಕಟ್ಟಿ, ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಹುಲ್ಕುಳಿ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ
ಜ್ಞಾನೇಂದ್ರ ಅವರಿಗೆ ಬರೆದ ಪತ್ರದಲ್ಲಿ ಅಮ್ರಪಾಲಿ ಸುರೇಶ್ ಆಗ್ರಹಿಸಿದ್ದಾರೆ.
