ಪಂಚ ಗ್ಯಾರಂಟಿ ಕುರಿತು
ವ್ಯಾಪಕ ಪ್ರಚಾರ
ಕಿಮ್ಮನೆ-ಆರ್‌ಎಂ
ಮಾರ್ಗದರ್ಶನದಲ್ಲಿ ಹಿಂದುಳಿದ ವರ್ಗಗಳ ಸಂಘಟನೆ – ಕರಕುಚ್ಚಿ ಲೋಕೇಶ್
ಕಾಂಗ್ರೆಸ್ ಸದಾ
ಕಾಲ ಜನಪರ ಕಾರ್ಯಕ್ರಮಗಳನ್ನ ನೀಡುತ್ತದೆ. ಹಿಂದೆ ಗರೀಬಿ ಹಠಾವೋ, ಪಂಚಶೀಲ, ಭೂ ಸುಧಾರಣೆ ಈಗ ಕರ್ನಾಟಕ
ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಸದಾಕಾಲ ಜನಸಾಮಾನ್ಯರ ಪರ ಎನ್ನುವುದಕ್ಕೆ ಉದಾಹರಣೆಗಳು.
ಈ ಎಲ್ಲಾ ಕಾರ್ಯಕ್ರಮಗಳ ಕುರಿತು ಪ್ರಚಾರ ಮತ್ತು ಅರಿವು ಮೂಡಿಸಲು ಮುಂದೆ ಸಂಘಟನೆ ಬಲ ಪಡಿಸಲಾಗುವುದು
ಎಂದು ತೀರ್ಥಹಳ್ಳಿ ಗ್ರಾಮಾಂತರ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ಕರಕುಚ್ಚಿ ಲೋಕೇಶ್ ಹೇಳಿದ್ದಾರೆ.
ಗುರುವಾರ ತೀರ್ಥಹಳ್ಳಿಯಲ್ಲಿ
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಗ್ರಾಮಕ್ಕೂ ಅಧ್ಯಕ್ಷರನ್ನು ಆಯ್ಕೆ ಮಾಡಿ ಬೂತ್
ಮಟ್ಟದಲ್ಲಿ ಸಂಘಟನೆ ಬಲಗೊಳಿಸಿ ಮುಂದಿನ ಚುನಾವಣೆ ಹೊತ್ತಿಗೆ ಪಕ್ಷವನ್ನು ಸದೃಢಗೊಳಿಸಲು ಪಕ್ಷದ ನಾಯಕರಾದ
ಕಿಮ್ಮನೆ ರತ್ನಾಕರ್ ಮತ್ತು ಆರ್.ಎಂ. ಮಂಜುನಾಥ ಗೌಡರ ಜೊತೆ ಸಮಾಲೋಚನೆ ಮಾಡಿ ಅವರ ಮಾರ್ಗದರ್ಶನದಂತೆ
ಪ್ರತಿ ಹಳ್ಳಿಯಲ್ಲೂ ಯೋಜನ ಬದ್ಧವಾಗಿ ಕೆಲಸ ಮಾಡಲಾಗುತ್ತದೆ ಎಂದರು.
ಸಿದ್ದರಾಮಯ್ಯ ಉತ್ತಮ
ಆಡಳಿತ ನೀಡಿದ್ದಾರೆ. ಶಿವಕುಮಾರ್ ಅವರಿಗೆ ಅರ್ಹತೆ ಮೇಲೆ ಅವಕಾಶ ಸಿಕ್ಕಿದೆ. ತೀರ್ಥಹಳ್ಳಿಯಲ್ಲಿ ಮುಂದೆ
ಕಿಮ್ಮನೆ -ಆರ್ ಎಂ ಎಂ ಯಾರಿಗೆ ಟಿಕೆಟ್ ನೀಡಿದರು ಪಕ್ಷದ ಕೆಲಸ ಮಾಡಿ ಗೆಲ್ಲಿಸುವುದು ನಮ್ಮ ಗುರಿ
ಎಂದವರು ಹೇಳಿದರು. ಆರ್ ಎಸ್ ಎಸ್ ತನ್ನ ಸಂಘಟನೆ ನೋಂದಣಿ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಪ್ರಿಯಾಂಕ
ಖರ್ಗೆ ಹೇಳಿರುವದರಲ್ಲಿ ಏನೂ ತಪ್ಪಿಲ್ಲ. ಈ ದೇಶದ ಕಾನೂನು ಎಲ್ಲರಿಗೂ ಒಂದೇ ಎಲ್ಲರೂ ಸಮಾನರು. ಹೀಗೆ
ಕೇಳಿದ ಕೂಡಲೇ ಅವರು ಗಾಬರಿ ಆಗುವುದು ಏಕೆ ಎಂದು ಲೋಕೇಶ್ ಪ್ರಶ್ನೆ ಮಾಡಿದರು.
