ತೀರ್ಥಹಳ್ಳಿಯಲ್ಲಿ ನಟಮಿತ್ರರು ತಂಡದಿಂದ ರಂಗ ಯುಗಾದಿ

ಮಾರ್ಚ್‌ 21 ರಿಂದ 22ರ ವೆರೆಗೆ ಮೂರು ಅತ್ಯುತ್ತಮ ನಾಟಕ ಪ್ರದರ್ಶನ
ರಂಗದಮೇಲೆ ಮಹಾನ್‌ ಸಮಾಜವಾದಿ ಚಿಂತಕ ಲೋಹಿಯಾರ ರಾಮ ಕೃಷ್ಣ ಶಿವ

ಭಾರತದ ಮಹಾನ್‌ ಸಮಾಜವಾದಿ ಚಿಂತಕ ಹಾಗೂ ಮೇರು ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಗುರು ರಾಮಮನೋಹರ ಲೋಹಿಯಾ ಅವರ ಚಿಂತನೆಗಳನ್ನು ಆಧರಿಸಿದ ರಾಮ – ಕೃಷ್ಣ – ಶಿವ ನಾಟಕ ಮಾರ್ಚ್‌ 20 ರಂದು ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ಗಣೇಶ್‌ ಮಂದಾರ್ತಿ ನಿರ್ದೇಶಿಸಿದ್ದು ಭಾರತದ ಹೆಸರಾಂತ ನಟ ಹಾಗೂ ಮೂಲತಃ ರಂಗಕರ್ಮಿ ಆಗಿರುವ ಪ್ರಕಾಶ್‌ ರೈ ನೇತೃತ್ವದ ನಿರ್ದಿಗಂತ ತಂಡ ಅಭಿನಯಿಸಲಿದೆ.

21 ರಂದು ಈಗಾಗಲೇ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಪಡೆದಿರುವ ನಟಮಿತ್ರರು ತಂಡದ ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ‘ಆ ಊರು ಈ ಊರು” ನಾಟಕದ 15ನೇ ಪ್ರದರ್ಶನವನ್ನು ಪ್ರೇಕ್ಷಕರ ಒತ್ತಾಯದ ಮೇರೆಗೆ ಆಯೋಜಿಸಲಾಗಿದೆ. 22 ರಂದು ಬೆಂಗಳೂರಿನ ರಾಷ್ಟ್ರೀಯ ನಾಟಕಶಾಲೆಯ ವೀರ್ಣಾ ಶರ್ಮಾ ಭೂಸನೂರುಮಠ ನಿರ್ದೇಶನದ ‘ಈ ಕೆಳಗಿನವರು” ನಾಟಕ ಪ್ರದರ್ಶನವಾಗಲಿದೆ ಎಲ್ಲಾ ನಾಟಕಗಳು ಪ್ರತಿದಿನ ಸಂಜೆ 6.30ಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ ಎಂದು ಮಾಜಿ ರಂಗಾಯಣ ನಿರ್ದೇಶಕ, ನಟಮಿತ್ರರು ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಸಂದೇಶ ಜವಳಿ ಹೇಳಿದ್ದಾರೆ.

ರಂಗ ಯುಗಾದಿ ಹೆಸರಿನಲ್ಲಿ ಈ ಮೂರು ದಿನಗಳ ನಾಟಕೋತ್ಸವ ಇಲ್ಲಿ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ನಡೆಯಲಿದೆ. ಯುವಜನತೆಯನ್ನು ರಂಗಭೂಮಿ ಕಡೆಗೆ ಸೆಳೆಯುವ ಪ್ರಯತ್ನವಾಗಿ ಕಾಲೇಜು ವಿದ್ಯಾರ್ಥಿಗಳ ಒಂದು ತಿಂಗಳ ರಂಗ ಶಿಕ್ಷಣ ಸರ್ಟಿಫಿಕೇಟ್ ಕೋರ್ಸನ್ನು ಪ್ರಾರಂಭಿಸಲಾಗಿದೆ. ಸುಮಾರು 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ. ಪ್ರಸಾದನ, ರಂಗಪರಿಕರ ನಿರ್ಮಾಣ, ರಂಗ ಸಜ್ಜಿಕೆ, ಬೆಳಕಿನ ನಿರ್ವಹಣೆ, ರಂಗಸಂಗೀತ ತರಬೇತಿ ನೀಡಲಾಗುತ್ತಿದೆ. ಏಪ್ರಿಲ್‌ ತಿಂಗಳಿನಲ್ಲಿ 20 ದಿನಗಳ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಕಾರ್ಯದರ್ಶಿ ಚೇತನ್‌ ಜಿ, ಸದಸ್ಯರಾದ ಗುರುರಾಜ ಪಿ.ವಿ., ಶಿವಕುಮಾರ್‌ ಟಿ.ಆರ್.‌, ಶಿವಾಜಿ, ರಾಹುಲ್‌ ಗುಡ್ಡೇಕೊಪ್ಪ, ಕಾರ್ತಿಕ್‌, ಕ್ಷಿತಿಜಾ, ಆದಿತ್ಯ ಮತ್ತಿತರರು ಇದ್ದರು.
ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post