ತುಂಗಾ ಕಾಲೇಜಿನ ಪ್ರಾಂಶುಪಾಲ ಕೆ.ಎಲ್.ಪ್ರಸನ್ನಗೆ ಪಿತೃ ವಿಯೋಗ
ನಿವೃತ್ತ ಕಂದಾಯ ಅಧಿಕಾರಿ ಕೆಸಲೂರು ಕೆ.ಟಿ ಲಿಂಗಪ್ಪ ಶುಕ್ರವಾರ ರಾತ್ರಿ 9.30 ಕ್ಕೆ ನಿಧನರಾಗಿದ್ದಾರೆ. ಅವರು ಚನ್ನಗಿರಿ, ರಿಪ್ಪನಪೇಟೆ, ಹೆದ್ದಾರಿಪುರ ಆರಗದಲ್ಲಿ ಗ್ರಾಮ ಲೆಕ್ಕಿಗರಾಗಿ, ನಂತರ ತೀರ್ಥಹಳ್ಳಿ ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ `ರೆಕಾರ್ಡ್ ರೂಮ್ ಲಿಂಗಪ್ಪ’ ಎಂದು ಜನಾನುರಾಗಿಯಾಗಿದ್ದರು. ಅವರು ಪುತ್ರ ತುಂಗಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಕೆ.ಎಲ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಕೆಸಲೂರಿನಲ್ಲಿ ಶನಿವಾರ ನಡೆಯಲಿದೆ.