ವ್ಯಾಘ್ರನ ಬಾಯಿಗೆ
ಹಸು
ಆತಂಕದಲ್ಲಿ ಗ್ರಾಮಸ್ಥರು
ಅರಣ್ಯ ಇಲಾಖೆ ಗಪ್ ಚುಪ್
ಹುಲಿ, ಚಿರತೆ, ಕಾಡುಕೋಣ,
ಹಂದಿಯಿಂದ ರಕ್ಷಣೆ ಇಲ್ಲ
ಅರಣ್ಯ ಇಲಾಖೆ ಸ್ಪಂಧಿಸುತ್ತಿಲ್ಲ
- ಗ್ರಾಮಸ್ಥರು
ತೀರ್ಥಹಳ್ಳಿ ತಾಲ್ಲೂಕಿನ
ಆಗುಂಬೆ ಸಮೀಪದ ಹೊನ್ನೇತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಬಳ ಸರ್ಕಾರಿ ಶಾಲೆ ಬಳಿ ಬುಧವಾರ ಹುಲಿ
ದಾಳಿಗೆ ಹಸು ಮೃತಪಟ್ಟಿದೆ.
ಹಸಿರುಮನೆ ಸಮೀಪ ತೋಟಕ್ಕೆಂದು
ತೆರಳಿದಾಗ ರೈತರೊಬ್ಬರ ಮೇಲೆ ಇತ್ತೀಚೆಗೆ ಕಾಡುಕೋಣ ದಾಳಿ ಮಾಡಿದೆ. ಈ ಪ್ರಕರಣ ಮಾಸುವ ಮುನ್ನವೇ ನಾಬಳದಲ್ಲಿ
ಹುಲಿ ದಾಳಿ ನಡೆಸಿದೆ. ಈ ಭಾಗದಲ್ಲಿ ಹಲವು ದಿನಗಳಿಂದ ಹುಲಿ, ಚಿರತೆ ನಿರಂತರವಾಗಿ ಜಾನುವಾರುಗಳ ಮೇಲೆ
ದಾಳಿ ನಡೆಸಿ ಸಾಯಿಸುತ್ತಿದೆ.
ಜಾನುವಾರುಗಳ ಮೇಲೆ
ಹುಲಿ ದಾಳಿ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಹುಲ್ಲು, ಸೊಪ್ಪು, ತರಗೆಲೆ,
ಕಟ್ಟಿಗೆ, ಕಾಲು ದಾರಿಗಳ ಬಳಕೆ ಮುಂತಾದ ಸಂದರ್ಭ ಏಕಾಂಗಿ ನಡಿಗೆ ಆತಂಕ ಮೂಡಿಸಿದೆ. ಪ್ರಾಣಿಗಳು ಮನುಷ್ಯರ
ಮೇಲೂ ದಾಳಿ ಮಾಡುವ ಭಯದ ವಾತಾವರಣ ಸೃಷ್ಟಿಯಾಗಿದ್ದು, ಹುಲಿ, ಚಿರತೆ, ಕಾಡುಕೋಣ, ಹಂದಿ ಕುರಿತು ಅರಣ್ಯ
ಇಲಾಖೆಗೆ ಮಾಹಿತಿ ನೀಡಿದರು ಸ್ಪಂದನೆ ದೊರೆಯುತ್ತಿಲ್ಲ ಎಂದು ಗ್ರಾಮಸ್ತರು ಅಳಲು ತೋಡಿಕೊಳ್ಳುತ್ತಾರೆ.
Tags:
ಪ್ರಾಣಿ ದಾಳಿ

