ಬಿ.ಜೆ. ಪುಟ್ಟಸ್ವಾಮಿ ರಾಜಕೀಯ ತೊರೆದು ಸನ್ಯಾಸತ್ವ ಸ್ವೀಕಾರ

ಬಿ.ಜೆ. ಪುಟ್ಟಸ್ವಾಮಿ ರಾಜಕೀಯ ತೊರೆದು ಸನ್ಯಾಸತ್ವ ಸ್ವೀಕಾರ



ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆಪ್ತ ಬಿ.ಜೆ ಪುಟ್ಟಸ್ವಾಮಿ ರಾಜಕೀಯ ತೊರೆದು ಶುಕ್ರವಾರ ಅಧಿಕೃತವಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ.

ಮಾಜಿ ಸಚಿವ, ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಬಿ.ಜೆ. ಪುಟ್ಟಸ್ವಾಮಿ (82) ಶುಕ್ರವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ನೆಲಮಂಗಲ ಸಮೀಪವಿರುವ ತೈಲೇಶ್ವರ ಗಾಣಿಗರ ಸಂಸ್ಥಾನ ಮಠದಲ್ಲಿ ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಪರಮಪೂಜ್ಯ ಶ್ರೀ ಜಯೇಂದ್ರಪುರಿ ಮಹಾಸ್ವಾಮಿ ಅವರು ಪುಟ್ಟಸ್ವಾಮಿ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು.

ವಿಶೇಷ ಎಂದರೆ ಸಾಕಷ್ಟು ವಯಸ್ಸಾದ ನಂತರ ಅವರು ಸನ್ಯಾಸ ಸ್ವೀಕರಿಸಿ ಸ್ವಾಮೀಜಿಯಾಗಿರುವುದು... ಅಂದ ಹಾಗೆ ವಿಭಿನ್ನ ಕ್ಷೇತ್ರದಲ್ಲಿ ಹೆಸರು ಮಾಡಿದವರು ಸ್ವಾಮೀಜಿಯಾಗುತ್ತಿರುವುದು ಇದೇ ಮೊದಲೆನಲ್ಲ..

ಟಿವಿಯಲ್ಲಿ ಯೋಗಾಸನ ಹೇಳಿಕೊಡುತ್ತಿದ್ದವರು, ಆಯುರ್ವೇದ ವೈದ್ಯರಾಗಿದ್ದವರು, ಸಿನಿಮಾದಲ್ಲಿ ಪಾರ್ಟು ಮಾಡುತ್ತಿದ್ದವಾರು ಈಗ ಸ್ವಾಮಿಗಳಾಗಿದ್ದಾರೆ. ಆದರೆ ಯಶಸ್ವಿ ರಾಜಕಾರಣಿ ಒಬ್ಬರು ಸ್ವಾಮೀಜಿ ಆಗುತ್ತಿರುವುದು ಇದೇ ಮೊದಲು.

ಈ ಹಿಂದೆ ಸನ್ಯಾಸಿಗಳಾಗಿದ್ದ ಸ್ವಾಮಿ ಅಗ್ನಿವೇಶ್, ನೀಲಗುಂದ ಸ್ವಾಮೀಜಿ ರಾಜಕಾರಣದಲ್ಲೂ ಹೆಸರು ಮಾಡಿದ್ದರು


ಇನ್ನು ಸನ್ಯಾಸ ಸ್ವೀಕರಿಸಿದ್ದ ಉಮಾಭಾರತಿ ಮಧ್ಯ ಪ್ರದೇಶ ಸಿಎಂ ಆಗಿದ್ದರು. ಕರ್ನಾಟಕದ ಮಂಗಳೂರಿನಲ್ಲಿ ಸನ್ಯಾಸ ಜೀವನ ಸವೆಸಿದ್ದ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಆಗಿ ನಿರಂತರ ಎರಡನೇ ಬಾರಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಪುಟ್ಟಸ್ವಾಮಿಯವರ ವಿಚಾರದಲ್ಲಿ ಇದು ಉಲ್ಟಾ ಆಗಿದೆ....!

ಶ್ರೀ ಪೂರ್ಣಾನಂದ ಪುರಿ ಸ್ವಾಮಿಗಳೆಂದು ಪುಟ್ಟಸ್ವಾಮಿ ಅವರಿಗೆ ನಾಮಕರಣ ಮಾಡಲಾಗಿದೆ. ಪುಟ್ಟಸ್ವಾಮಿ ಅವರು ಸದ್ಯದಲ್ಲೇ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗರ ಮಹಾ ಸಂಸ್ಥಾನ ಮಠದ ಪ್ರಥಮ ಪೀಠಾಧಿಪತಿಯಾಗಲಿದ್ದಾರೆ. ಸನ್ಯಾಸ ದೀಕ್ಷೆ ಪಡೆಯುವ ಮುನ್ನ ಗುರುವಾರ ರಾಜರಾಜೇಶ್ವರಿ ದೇವಸ್ಥಾನದ ಕೈಲಾಸ ಆಶ್ರಮದಲ್ಲಿ ಪುಟ್ಟಸ್ವಾಮಿ ಅವರಿಗೆ ಬ್ರಹ್ಮಚರ್ಯ ದೀಕ್ಷೆ ನೀಡಲಾಗಿತ್ತು.

ಗಾಣಿಗರ ಮಠದ ಪೀಠಾಧಿಪತಿಯಾಗಿ ಸಮಾಜ ಸುಧಾರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕೆನ್ನುವ ಉದ್ದೇಶದಿಂದಲೇ ರಾಜಕಾರಣ ತೊರೆದಿದ್ದೇನೆ ಎಂದು ತಿಳಿಸಿದ್ದಾರೆ. ಕ್ಯಾಬಿನೆಟ್ ದರ್ಜೆಯ ಸ್ಥಾನ‌ಮಾನ ಹೊಂದಿರುವ ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಸ್ಥಾನಕ್ಕೆ ಸ್ವಯಂ ಪ್ರೇರಣೆಯಿಂದ ಏಪ್ರಿಲ್ 30 ರಂದು ರಾಜೀನಾಮೆ ನೀಡಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post