ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋಣಂದೂರು ಮುಖ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದ ಚಿನ್ನಪ್ಪ ಮಾಸ್ಟರ್ (85) ಭಾನುವಾರ ನಿಧನರಾಗಿದ್ದಾರೆ. ಮೃತರ ಪಾರ್ಥಿವ ಶರೀರ ನವೆಂಬರ್ 2ರ ಸೋಮವಾರ ಬೆಳಿಗ್ಗೆ 12 ರ ವರೆಗೆ ಸ್ವಗೃಹ ಕೋಣಂದೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಹುಟ್ಟೂರು ಮರಗಳಲೆಯ ತೋಟದ ಮನೆಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲದವರು ತಿಳಿಸಿರುತ್ತಾರೆ.
