ಮಲ್ಲಂದೂರಿನಲ್ಲಿ ಮತ್ತೆ ಕಾಡಾನೆ ಲೂಟಿ ಆರಂಭ

ಒಂಟಿಸಲಗ ಹೋಯ್ತೆಂಬ ಖುಷಿ ಕಸಿದ ಕಾಡಾನೆ ಆಗಮನ

ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ, ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಕಾಡಾನೆ ಲೂಟಿ ನಡೆದಿದೆ. ಹಿಂದೆ ಇದ್ದ ಒಂಟಿ ಕಾಡಾನೆ ಕಳೆದ ವರ್ಷ ಕಾಲ್ತುಳಿದ ಹಿನ್ನಲೆಯಲ್ಲಿ ಹಿಡಿದು ಪಳಗಿಸುವ ಪ್ರಯತ್ನ ನಡೆಸಲಾಗಿತ್ತು. ಕೋರ್ಟ್‌ ಸೂಚನೆ ಸಿಗದ ಹಿನ್ನಲೆಯಲ್ಲಿ ಕೊನೆಯದಾಗಿ ಬಂಡೀಪುರ ಕಾಡಿಗೆ ಬಿಟ್ಟು ಮತ್ತೆ ಕಾಡಿಗೆ ಅಟ್ಟಿದ್ದರು.

ಕಿಗ್ಗಾ ಭಾಗದಲ್ಲಿ ಎರಡ್ಮೂರು ದಿನಗಳ ಹಿಂದೆ ಗಂದೆ ಲೂಟಿ ಮಾಡಿದ್ದ ಎರಡು ಕಾಡಾನೆಗಳ ಪೈಕಿ ಒಂದು ಕಾಡಾನೆ ಶುಕ್ರವಾರ ಮಲ್ಲಂದೂರಿಗೆ ಲಗ್ಗೆ ಇಟ್ಟಿದೆ. ಮತ್ತೊಂದು ಕಾಡಾನೆ ಸಿಳಿವು ಸದ್ಯಕ್ಕೆ ಸಿಕ್ಕಿಲ್ಲ. ಆದರೀಗ ಎರಡು ಕಾಡಾನೆ ಆಗಮಿಸುವ ಭಯದಲ್ಲಿರುವ ಮಲ್ಲಂದೂರು ಗ್ರಾಮದಲ್ಲಿ ಆನೆಗಳು ನಿರಂತರ ಸಂಚಾರ ನಡೆಸುವ ಭಯ ಎದುರಾಗಿದೆ. ಸಮೀಪದ ಕೊಪ್ಪರತೋಟ ಗ್ರಾಮದ ರೈತ ಶೇಖರಪ್ಪ ಅವರ ಭತ್ತದ ಗದ್ದೆಗೆ ಆನೆ ಲಗ್ಗೆ ಇಟ್ಟಿದ್ದು ಭತ್ತ ಹುಡಿಮಾಡಿದೆ.

ಒಂಟಿಸಲಗದ ಕಾಟದಿಂದ ಮಲ್ಲಂದೂರು ಶಾಂತವಾಗಿರಲಿದೆ ಎಂಬ ನಂಬುಗೆ ಹೊಂದಿದ್ದ ಗ್ರಾಮದಲ್ಲಿ ಇದೀಗ ಆನೆಗಳ ಹಾವಳಿ ಆರಂಭವಾಗುವ ಮುನ್ಸೂಚನೆ ಲಭಿಸಿದೆ. ಹಾನಿ ಪ್ರಮಾಣ ಹೆಚ್ಚಾಗುವ ಸನ್ನಿವೇಶ ಎದುರಾಗಿದ್ದ ರೈತರು ಕಂಗಾಲಾಗಿದ್ದಾರೆ.

ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post