ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಯ ನಿರ್ದೇಶಕರಾಗಿ ನೇಮಕ
ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಕೆಸ್ತೂರು ಮಂಜುನಾಥ್ ಅವರನ್ನು ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಸಮಿತಿಯ ನಿರ್ದೇಶಕರಾಗಿ ನೇಮಿಸಿದೆ.
ತೀರ್ಥಹಳ್ಳಿಯ ಅಪ್ಪಟ ದೇಸಿ ಶೈಲಿಯ ರಾಜಕಾರಣಿ ಎಂದೆ ಪಕ್ಷಾತೀತವಾಗಿ ಜನಪ್ರಿಯರಾಗಿರುವ ಕೆಸ್ತೂರು
ಮಂಜುನಾಥ್, ಕಾಂಗ್ರೆಸ್ ಪಕ್ಷದಲ್ಲಿ ಕಳೆದ 40 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತ ಮತ್ತು ನಾಯಕನಾಗಿ
ಗುರುತಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅವರಿಗೆ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾರ್ದಿಕವಾಗಿ
ಅಭಿನಂದಿಸಿ ಗೌರವಿಸಿದ್ದಾರೆ.

