ವಾಯ್ಸ್ ಆಫ್ ಶಿವಮೊಗ್ಗ ಪತ್ರಿಕೆಯ ಸಂಪಾದಕ ಭಂಡಿಗಡಿ ನಂಜುಂಡಪ್ಪ (75 ವರ್ಷ) ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಅವರು ಪತ್ನಿ ಉಮಾ ಭಂಡಿಗಡಿ ಮತ್ತು ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ನಂಜುಂಡಪ್ಪ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ, ರಾಷ್ಟ್ರೀಯ ಮಂಡಳಿ ಸದಸ್ಯರಾಗಿಯೂ ಹಲವು ವರ್ಷಗಳಿಂದ ಕರ್ತ್ಯವ್ಯ ನಿರ್ವಹಿಸಿದ್ದಾರೆ.
ಕೊನೆಯ ಕ್ಷಣಗಳವರೆಗೂ
ಪತ್ರಿಕಾ ಪ್ರಕಟಣೆಯನ್ನು ಅತ್ಯಂತ ಬದ್ಧತೆಯಿಂದ ನಡೆಸಿಕೊಂಡು ಬರುತ್ತಿದ್ದ ಅವರು ಅಂಚೆಯ ಮೂಲಕ ಪತ್ರಿಕೆ
ಓದುವ ಚಂದದಾರರಿಗೆ ದಿನನಿತ್ಯವೂ ತಾವೆ ಅಂಚೆ ಚೀಟಿ ಹಚ್ಚಿ ಪೋಸ್ಟ್ ಮಾಡಿ ಬರುತ್ತಿದ್ದರು. ಮಾತ್ರವಲ್ಲದೇ
ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲಾ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳುವ ಮೂಲಕ ಯುವ ಪತ್ರಕರ್ತರಿಗೆ
ಮಾದರಿಯಾಗಿದ್ದರು.
ಇವರ ನಿಧನಕ್ಕೆ ತೀರ್ಥಹಳ್ಳಿ
ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.
