ತೂದೂರಿನಲ್ಲಿ ಗಾಂಧಿ ಜಯಂತಿ ಸ್ವಚ್ಚತಾ ಆಂದೋಲನ

ಗುರುಪ್ರಸಾದ್‌ ಕಾಂಕ್ರಿಟ್‌ ಪ್ರಾಡಕ್ಟ್ಸ್‌ ಕಾರ್ಮಿಕರಿಂದ ಸ್ವಚ್ಚತೆ
ಮಧುರಾಜ್‌ ಹೆಗ್ಡೆ ನೇತೃತ್ವದಲ್ಲಿ ಆಂದೋಲನ

ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ರಾಷ್ಟ್ರೀಯ ಹೆದ್ದಾರಿ-169ರ ಇಕ್ಕೆಲಗಳಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಚತೆ ನಡೆಯಿತು. ಮಾಳೂರಿನ ಗುರುಪ್ರಸಾದ್‌ ಕಾಂಕ್ರಿಟ್‌ ಪ್ರಾಡಕ್ಟ್ಸ್ ಕಾರ್ಮಿಕರು ಸ್ವಚ್ಚತೆಯ ಮೂಲಕ ಗಾಂಧಿ ಜಯಂತಿಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

ತೂದೂರು ಗ್ರಾಮ ಪಂಚಾಯಿತಿ ಸದಸ್ಯ, ಮಾಜಿ ಅಧ್ಯಕ್ಷ ಮಧುರಾಜ್‌ ಹೆಗ್ಡೆ ಕಂಪನಿ ಕಾರ್ಮಿಕರನ್ನು ಪ್ರೇರೇಪಿಸುವ ಮೂಲಕದ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತೆಗೆ ಆದ್ಯತೆ ನೀಡಿದ್ದಾರೆ. ಸ್ವಚ್ಚತೆಯೇ ಸೇವೆ ಟ್ಯಾಗ್‌ ಲೈನ್‌ ಅಡಿಯಲ್ಲಿ ನನ್ನ ಗ್ರಾಮ ಸ್ವಚ್ಚ ಗ್ರಾಮ ಎಂಬ ಘೋಷಣೆಗಳನ್ನು ಮೊಳಗಿಸುತ್ತ ಬೀದಿಗಳನ್ನು ಸ್ವಚ್ಚಗೊಳಿಸಿದರು.

ಅಲ್ಲದೇ  ಗುರುಪ್ರಸಾದ್‌ ಕಾಂಕ್ರಿಟ್‌ ಪ್ರಾಡಕ್ಟ್ಸ್‌ ನುರಿತ ಕಾರ್ಮಿಕರ ಸೇವಾ ಬದ್ಧತೆಯಿಂದ ತೂದೂರು ಭಾಗದ ಹತ್ತಾರು ಗುಂಡಿಗಳನ್ನು ಕಾಂಕ್ರಿಟ್‌ಗಳ ಮೂಲಕ ಮುಚ್ಚಿ ಸೈ ಎನಿಸಿಕೊಂಡಿದ್ದಾರೆ. ಈ ತಂಡದ ವಿಶೇಷ ಪ್ರಯತ್ನದಿಂದಾಗಿ ಸ್ಥಳೀಯವಾಗಿ ಹೆದ್ದಾರಿಯಲ್ಲಿದ್ದ ಅನೇಕ ಗುಂಡಿಗಳಿಗೆ ಅಂತ್ಯ ಕಂಡಿದೆ. ಪ್ರಯಾಣಿಕರು ಈ ಭಾಗದಲ್ಲಿ ಸುಖಕರ ಪ್ರಯಾಣ ಬೆಳೆಸುವಂತಾಗಿದ್ದು ಇವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.



ನೆಲದ ಧ್ವನಿ

ಆತ್ಮೀಯರೇ. ಕಲೆ, ಸಾಹಿತ್ಯ, ಚಳವಳಿ,ರಾಜಕೀಯ ಸಾಮಾಜಿಕ ಕ್ರಾಂತಿಗೆ ತನ್ನದೇ ಕೊಡುಗೆ ನೀಡಿದ ತೀರ್ಥಹಳ್ಳಿ ತಾಲೂಕು ಕೇಂದ್ರದಲ್ಲಿ 2008ರಲ್ಲಿ ಆರಂಭಗೊಂಡ “ನೆಲದ ಧ್ವನಿ” ದಿನ ಪತ್ರಿಕೆ ತನ್ನದೇ ಆದ ಛಾಪು ಮೂಡಿಸಿದೆ. ಜನ ಜಾಗೃತಿಗಾಗಿ, ಸಮಾಜದಲ್ಲಿನ ಮೌಡ್ಯ, ಕಂದಾಚಾರ, ದುರಾಡಳಿತ ಖಂಡನೆ, ಭ್ರಷ್ಟಾಚಾರ ನಿವಾರಣೆ ಸೇರಿದಂತೆ ಒಂದು ಸ್ವಸ್ಥ ಸಮಾಜ ಕಟ್ಟಲು ಬೇಕಾದ ಜಾಗೃತ ಮಾಹಿತಿ ನೀಡುವ ಮೂಲಕ ಸಮಾಜದ ಏಳಿಗೆಗೆ ಜನರನ್ನು ಎಚ್ಚರಿಸುವ ಕೆಲಸದಲ್ಲಿ “ನೆಲದ ಧ್ವನಿ ಪತ್ರಿಕೆ” ಪರಿಣಾಮಕಾರಿ ಪಾತ್ರ ನಿರ್ವಹಿಸಿತ್ತು. ಇದು ಬದಲಾವಣೆಯ ಸಮಯ. ಕಾಲಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕುವ ನಿಟ್ಟಿನಲ್ಲಿ ನೆಲದ ಧ್ವನಿ ಈಗ ಈ ಪತ್ರಿಕೆಯಾಗಿ ನಿಮ್ಮನ್ನು ತಲುಪಲಿದೆ. ಇದರ ಹಿಂದೆ ಯಾವುದೇ ಅಜೆಂಡಾ ಇಲ್ಲವೆಂದು ಸ್ವಷ್ಟಪಡಿಸುತ್ತೇವೆ. ತಾಲ್ಲೂಕು ಕೇಂದ್ರದ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ವಿದ್ಯಮಾನಗಳನ್ನು ಓದುಗರಿಗೆ ಶೀಘ್ರ, ನಿಖರವಾಗಿ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಮ್ಮ ಬಳಗದ್ದು. ನಮ್ಮ ಪ್ರಯತ್ನಕ್ಕೆ ನಿಮ್ಮ ಹೃತ್ಪೂರ್ವಕ ಬೆಂಬಲ ಇರುತ್ತದೆ ಎಂಬುದು ನಮ್ಮ ಅಚಲ ನಂಬಿಕೆ. -ನೆಲದ ಧ್ವನಿ ಬಳಗ

Post a Comment

Previous Post Next Post